ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಗುರುತು ತಪ್ಪಾಗಿ ಪೊಲೀಸರು ಸಹೋದ್ಯೋಗಿಯ ಮೇಲೆ ಬುಧವಾರ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಂದ್ವಾರಾದಲ್ಲಿ ನಿಯೋಜನೆಗೊಂಡಿದ್ದ ಪೋಲಿಸ್ ಇಲಾಖೆಯ ಫಾಲೋವರ್ ಅಜಯ್ ಧಾರ್ ಮೇಲೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೇವಾಲಯದ ಕಾವಲುಗಾರ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಧಾರ್ ಹಂಡ್ವಾರಾ ಪೊಲೀಸ್ ಠಾಣೆಯಿಂದ ಮುಖ್ಯ ಹಂದ್ವಾರ ಪಟ್ಟಣದಲ್ಲಿರುವ ದೇವಸ್ಥಾನಕ್ಕೆ ಮಲಗಲು ಹೋಗುತ್ತಿದ್ದರು. "ಧಾರ್ ತನ್ನ ಮೊಬೈಲ್ ಫೋನಿನಲ್ಲಿ ಹೆಡ್‌ಫೋನ್‌ಗಳನ್ನು ಬಳಸುತ್ತಿದ್ದರು. ಅವರು ದೇವಸ್ಥಾನದ ಬಳಿ ಬಂದಾಗ, ಅಲ್ಲಿನ ಸಿಬ್ಬಂದಿ ಅನುಮಾನಾಸ್ಪದ ಚಲನೆಯನ್ನು ಗಮನಿಸಿ ಆತನಿಗೆ ನಿಲ್ಲುವಂತೆ ಸೂಚಿಸಿದ್ದಾರೆ. ಧಾರ್ ಹೆಡ್ ಫೋನ್ ಹಾಕಿಕೊಂಡಿದ್ದರು ಸ್ಪಷ್ಟವಾಗಿ ಕೇಳಿಸಿಕೊಂಡಿಲ್ಲ. ಇದು ಆತನ ಮೇಲೆ ಗುಂಡು ಹಾರಿಸಲು ಪ್ರೇರೇಪಿಸಿದ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ ಅವರನ್ನು ತಕ್ಷಣ ಇಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅವರು ಹೇಳಿದ್ದಾರೆ.