ಕಾಸರಗೋಡು: ಜಿಲ್ಲಾ ಕುಟುಂಬಶ್ರೀ ಮಿಶನ್ ನೇತೃತ್ವದಲ್ಲಿ ಅಗ್ರಿ ನ್ಯೂಟ್ರಿ ಗಾರ್ಡನ್ ಯೋಜನೆಯೊಂದಿಗೆ ಕಾಸರಗೋಡು ಅನಕ್ಸ್ ಹಾಲ್ ಅಗ್ರಿ ನ್ಯೂಟ್ರಿ ಗಾರ್ಡನ್ ಕ್ಯಾಂಪೈನ್ ಜಿಲ್ಲಾ ತರಬೇತಿ ಪೂರ್ಣಗೊಂಡಿದೆ. ಎರಡು ದಿನಗಳಿಂದ ನಡೆದ ತರಬೇತಿಯ ಜಿಲ್ಲಾ ಮಟ್ಟದ ಉದ್ಘಾಟನೆ ಕುಟುಂಬಶ್ರೀ ಜಿಲ್ಲಾ ಮಿಷನ್ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್ ನಿರ್ವಹಿಸಿದರು. ಎ ಡಿ ಎಂ ಸಿ.ಎಚ್ ಇಕ್ಬಾಲ್, ಪ್ರಕಾಶನ್ ಪಾಲಾಯ್, ಡಿ ಪಿ ಎಂ ರಾಮಣ್ಣ ಮಾತನಾಡಿದರು. ಸೀನಿಯರ್ ಅಸಿಸ್ಟೆಂಟ್ ಪಿ. ಡಿ ದಾಸ್ ವಿಷಯ ಮಂಡಿಸಿದರು. ಪರಪ್ಪ, ನೀಲೇಶ್ವರ, ಕಾಞಂಗಾಡ್ ಬ್ಲಾಕ್‍ನ ಹಿರಿಯ ಕೃಷಿಕರು, ಬ್ಲಾಕ್ ಸಂಯೋಜಕರು ಮತ್ತು ಇತರರು ಭಾಗವಹಿಸಿದ್ದರು.
ಎರಡನೇ ದಿನ ಎಡಿಎಂ ಸಿ ಪ್ರಕಾಶನ್ ಪಾಲೈ ಅಧ್ಯಕ್ಷತೆ ವಹಿಸಿದ್ದರು. ಸೀನಿಯರ್ ಅಸಿಸ್ಟೆಂಟ್ ಪಿ. ಡಿ ದಾಸ್ ವಿಷಯ ಮಂಡಿಸಿದರು. ಡಿಪಿಎಂ ರಾಮನೆಶ್ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಮಂಚೇಶ್ವರಂ, ಕಾರಡ್ಕ, ಕಾಸರಗೋಡು ಬ್ಲಾಕ್ ನ ಹಿರಿಯ ಕೃಷಿಕರು, ಬ್ಲಾಕ್ ಕೋ ಆರ್ಡಿನೇಟರ್ ಗಳು ಉಪಸ್ಥಿತರಿದ್ದರು.
ಗುರಿ 402 ಹೆಕ್ಟರ್ ಭೂಮಿಯಲ್ಲಿ ಕೃಷಿ:
ಯೋಜನೆಯೊಂದಿಗೆ ಜಿಲ್ಲೆಯಲ್ಲಿ 663 ಎಡಿಎಸ್ ಗಳಲ್ಲಿ 50 ಮನೆಗಳು ಕೇಂದ್ರೀಕರಿಸಿ 402 ಹೆಕ್ಟರ್ ಭೂಮಿಯಲ್ಲಿ ಕೃಷಿ ಸಾಧ್ಯವಿದೆ. ಕುಟುಂಬದ ಸಂಪೂರ್ಣ ಪೌಷ್ಠಿಕ ಅಗತ್ಯತೆಗಳು ಪ್ರತಿ ಮನೆಯಲ್ಲೂ ಪೌಷ್ಠಿಕ ಉದ್ಯೋಗಗಳು ಮತ್ತು ಪ್ರತಿ ಸಿ ಡಿ.ಎಸ್ ಗಳಲ್ಲಿ ಪೌಷ್ಟಿಕ ಆಹಾರ ತೋಟಗಳನ್ನು ಸಜ್ಜುಗೊಳಿಸುವುದು. ವಿಷ ವಿಮುಕ್ತ ತರಕಾರಿ, ಹಣ್ಣುವರ್ಗಗಳು ಇದರ ಬಳಕೆಗೆ ಆರೋಗ್ಯಕರವಾದ ಉತ್ಪನ್ನ ತಯಾರಿಸುವ ಗುರಿ ಯೋಜನೆಯ ಮೂಲಕ 10 ಲಕ್ಷ ಕುಟುಂಬಗಳಿಗೆ ಪೌಷ್ಟಿಕ ಸಮೃದ್ಧವಾದ ತರಕಾರಿಗಳು ಮತ್ತು ಹಣ್ಣುಗಳನ್ನು ತಲುಪಲು ಸಾಧ್ಯವಾಗುತ್ತದೆ. ಪೆÇೀಷಕ ಸಮೃದ್ಧವಾದ ಆಹಾರದ ಮೂಲಕ ಕೋವಿಡ್ ರಕ್ಷಣೆಯನ್ನು ಪ್ರಬಲಗೊಳಿಸಲು ಸಾಧ್ಯವಿದೆ. ನಾನು ನನ್ನ ನೆರೆಕರೆ ಕೂಟವೂ ಕೃಷಿಗೆ, ನಾನು ನನ್ನವರು ಕೃಷಿಗೆ ಘೋಷಣೆ ಮೂಲಕ ಆರಂಭಿಸಿದ ವಿವಿಧ ವರ್ಗದ ಕೃಷಿ ಉತ್ಪನ್ನ ಯೋಜನೆಯು ಕುಟುಂಬಶ್ರೀ ಮಿಷನ್ ಆವಿಷ್ಕರಿಸಿದೆ. ಯೋಜನೆಯ ಪ್ರಕಾರ ಮೂರು ಸೆಂಟ್ ಭೂಮಿಯಲ್ಲೂ ಐದು ವಿಧದ ತರಕಾರಿಗಳು, ಎರಡು ವಿಧದ ಫಲವೃಕ್ಷಗಳ ಕೃಷಿ ಮಾಡಬೇಕಾಗಿದೆ.