ಇಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಆಗಿ ಹೋಗಿದ್ದು, ಮನೆಯಿಂದಲೇ ಕೆಲಸಗಳು ಭರದಿಂದ ಸಾಗುತ್ತಿದೆ. ಆದರೆ ಈ ಮಧ್ಯೆ ನಾವು ಬಹಳಷ್ಟು ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ದೀರ್ಘಕಾಲ ಕುಳಿತು ಕೆಲಸ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ನೀವು ಕೇಳಿರಬೇಕು. ಆದರೆ ನಿಮ್ಮ ಕಾಲಿನ ಅಥವಾ ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
ಖಂಡಿತವಾಗಿಯೂ ನೀವು ಈ ಬಗ್ಗೆ ಹೆಚ್ಚಿನವರು ಗಮನ ಹರಿಸಿರುವುದಿಲ್ಲ. ಅದರಲ್ಲೂ ಈಗಿನ ವರ್ಕ್ ಫ್ರಮ್ ಸನ್ನಿವೇಶದಲ್ಲಂತೂ ಕಾಲಿನ ಮೇಲೆ ಲ್ಯಾಪ್ ಇಡುವುದು ಮತ್ತಷ್ಟು ಹೆಚ್ಚಾಗಿದೆ. ಆದರೆ ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಎಂತಹುದು ಎಂಬುದನ್ನು ಇಲ್ಲಿ ನೋಡೋಣ.
1. ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಬಹುದು:
ಅರೇ, ಲ್ಯಾಪ್‌ಟಾಪ್‌ಗೆ ನಿಮಗೆ ಏನು ಹಾನಿಯಾಗಬಹುದು ಎಂದು ಯೋಚಿಸಬಹುದು, ಆದರೆ ಹಾಗೆ ಯೋಚಿಸುವುದು ತಪ್ಪು. ಏಕೆಂದರೆ ಇದು ವೈರ್‌ಲೆಸ್ ಇಂಟರ್ನೆಟ್ ಸಿಗ್ನಲ್‌ಗಳನ್ನು (ಮೈಕ್ರೋವೇವ್) ಪಡೆಯುವುದರಿಂದ, ಇದರಿಂದ ವಿವಿಧ ಕಿರಣಗಳು ಹೊರಬರುತ್ತವೆ. ಇದು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಹಾನಿಗೊಳಗಾಗಬಹುದು. ಮತ್ತೊಂದೆಡೆ ಇದು ಪುರುಷರಲ್ಲಿ ವೀರ್ಯಾಣುಗಳ ಮೇಲೆ ಪರಿಣಾಮ ಬೀರಬಹುದು.
ಅಮೆರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ನಡೆಸಿದ ಅಧ್ಯಯನವು ನಿಮ್ಮ ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಳ್ಳುವುದರಿಂದ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಬಹುದು ಎಂದು ಕಂಡುಹಿಡಿದಿದೆ. ಆದ್ದರಿಂದ ಇನ್ನು ಮುಂದೆ ಆದರೂ ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಳ್ಳುವುದನ್ನು ಆದಷ್ಟು ದೂರಮಾಡಿ.
2. ಬೆನ್ನು ಮತ್ತು ಕುತ್ತಿಗೆ ನೋವನ್ನು ಉಂಟುಮಾಡಬಹುದು: ಲ್ಯಾಪ್ ಟಾಪ್ ಅನ್ನು ನಿಮ್ಮ ತೊಡೆಯ ಮೇಲೆ ಇಟ್ಟುಕೊಳ್ಳುವುದು ಕುತ್ತಿಗೆ ಮತ್ತು ಬೆನ್ನು ನೋವಿಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಆದ್ದರಿಂದ ಲ್ಯಾಪ್ಟಾಪನ್ನು ಮೇಜಿನ ಮೇಲೆ ಇಡಿ ಅಥವಾ ನೀವು ಸ್ಟ್ಯಾಂಡಿಂಗ್ ಡೆಸ್ಕ್ ಅನ್ನು ಬಳಸಬಹುದು, ಇದು ನಿಮ್ಮ ದೇಹದ ಭಂಗಿಗೆ ಉತ್ತಮವಾಗಿದೆ.
3. ನಿದ್ರಾಹೀನತೆಗೆ ಕಾರಣವಾಗಬಹುದು: ಆರಾಮವಾಗಿ ಮತ್ತು ಹಾಸಿಗೆಯಲ್ಲಿ ಕುಳಿತು, ಲ್ಯಾಪ್ ಟಾಪನ್ನು ತೊಡೆಯ ಮೇಲೆ ಇಟ್ಟುಕೊಂಡು ಟೈಪ್ ಮಾಡುವ ಅನೇಕ ಸಂದರ್ಭಗಳಿವೆ. ಹೀಗೆ ಮಾಡುವುದರಿಂದ ಸ್ಕ್ರೀನ್ ನ ಕಿರಣಗಳು ನಿಮ್ಮ ಕಣ್ಣುಗಳನ್ನು ಹಾನಿಗೊಳಿಸುತ್ತವೆ ಜೊತೆಗೆ ನಿದ್ರೆಗೆ ಕಾರಣವಾಗುವ ಮೆಲಟೋನಿನ್ ಹಾರ್ಮೋನ್ ಬಿಡುಗಡೆಯನ್ನು ನಿಗ್ರಹಿಸಬಹುದು. ಇದರಿಂದ ನೀವು ನಿದ್ರೆಯಲ್ಲಿ ತೊಂದರೆ ಅನುಭವಿಸಲು ಪ್ರಾರಂಭಿಸುತ್ತೀರಿ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಲ್ಯಾಪ್ ಟಾಪ್ ಅನ್ನು ತೊಡೆಯಲ್ಲಿ ಇಟ್ಟುಕೊಳ್ಳುವುದನ್ನು ನಿಲ್ಲಿಸಿ. ಹಾಗೆಯೇ, ಮಲಗುವ ವೇಳೆಗೆ ಪುಸ್ತಕವನ್ನು ಓದಿ.4. ಕ್ಯಾನ್ಸರ್ ಗೆ ಕಾರಣವಾಗಬಹುದು: ಯೂನಿವರ್ಸಿಟಿ ಹಾಸ್ಪಿಟಲ್ ಬಾಸೆಲ್‌ನ ಸಂಶೋಧನೆಯು ನಿಮ್ಮ ತೊಡೆಯ ಮೇಲೆ ಬಿಸಿಯಾದ ಲ್ಯಾಪ್‌ಟಾಪ್ ಇಡುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಇದರಿಂದ ಚರ್ಮದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆ ಇದೆ. ಜನರು ತಮ್ಮ ಸಂತಾನೋತ್ಪತ್ತಿ ಅಂಗಗಳ ಬಳಿ ಲ್ಯಾಪ್‌ಟಾಪ್‌ಗಳನ್ನು ಇಡುವುದರಿಂದ, ಇದು ಪ್ರಾಸ್ಟೇಟ್ ಮತ್ತು ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗಬಹುದು.