ಲಖನೌ: ಉತ್ತರ ಪ್ರದೇಶ ಸಂಪುಟವನ್ನು ಭಾನುವಾರ ವಿಸ್ತರಣೆ ಮಾಡಲಾಗಿದೆ. ಒಟ್ಟು ಏಳು ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಈಚೆಗಷ್ಟೇ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದ ಜಿತಿನ್ ಪ್ರಸಾದ ಅವರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ.
2022ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಸಂಪುಟ ವಿಸ್ತರಣೆಯ ಸಾಹಸಕ್ಕೆ ಮುಂದಾಗಿದೆ. ಉತ್ತರ ಪ್ರದೇಶ ಸರ್ಕಾರದಲ್ಲಿ ಗರಿಷ್ಠ 60 ಸಚಿವ ಸ್ಥಾನವನ್ನು ನೀಡಬಹುದಾಗಿದೆ. ಈವರೆಗೆ 43 ಸಚಿವರಷ್ಟೇ ಇದ್ದರು. ಭಾನುವಾರ 7 ಜನರಿಗೆ ಸಚಿವ ಸ್ಥಾನ ನೀಡಿದ ನಂತರ ಈಗ ಉತ್ತರ ಪ್ರದೇಶದ ಒಟ್ಟು ಸಚಿವರ ಸಂಖ್ಯೆ 60ಕ್ಕೆ ಏರಿದೆ.
ಜಿತಿನ್ ಪ್ರಸಾದ, ಪಲ್ಟು ರಾಮ್, ಛತರಪಾಲ್ ಗಂಗ್ವಾರ್, ಸಂಗೀತಾ ಬಲವಂತ ಬಿಂದ್, ಧರಮವೀರ್ ಪ್ರಜಾಪತಿ, ಸಂಜೀವ್ ಕುಮಾರ್ ಗೌರ್ ಮತ್ತು ದಿನೇಶ್ ಖಾತಿಕ್ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.