HEALTH TIPS

ಇದು ಬರೀ ಮಹಿಳೆಯರೇ ಇರುವ ವಿಶ್ವದ ಮೊದಲ ಆಟೋಮೋಟಿವ್​ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ!

                ನವದೆಹಲಿ: ಇಲ್ಲೊಂದು ಕಂಪನಿಯು ಸದ್ಯದಲ್ಲೇ 10 ಸಾವಿರಕ್ಕೂ ಅಧಿಕ ಮಹಿಳೆಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಿದ್ದು, ಇದು ಬರೀ ಮಹಿಳೆಯರೇ ಇರುವ ವಿಶ್ವದ ಮೊದಲ ಆಟೋಮೋಟಿವ್​ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ ಎಂದು ಕೂಡ ಅನಿಸಿಕೊಳ್ಳಲಿದೆ. ಅಂದಹಾಗೆ ಇಂಥದ್ದೊಂದು ಮಹಿಳಾಪ್ರಧಾನ ಫ್ಯಾಕ್ಟರಿಯ ಹೆಸರು ಓಲಾ ಫ್ಯೂಚರ್ ಫ್ಯಾಕ್ಟರಿ.

             ಓಲಾ ಇಲೆಕ್ಟ್ರಿಕ್​ ಕಂಪನಿಯ ಸಿಎಒ ಹಾಗೂ ಸ್ಥಾಪಕ ಭವಿಷ್​ ಅಗರ್​ವಾಲ್​ ಈ ಕುರಿತು ಘೋಷಿಸಿದ್ದು, ಓಲಾ ಫ್ಯೂಚರ್ ಫ್ಯಾಕ್ಟರಿ ಸಂಪೂರ್ಣವಾಗಿ ಮಹಿಳೆಯರಿಂದಲೇ ನಡೆಯಲಿದೆ ಎಂಬುದನ್ನೂ ಹೇಳಿದ್ದಾರೆ. ಓಲಾ ಇಲೆಕ್ಟ್ರಿಕ್​ನ ಓಲಾ ಫ್ಯೂಚರ್ ಫ್ಯಾಕ್ಟರಿಗೆ ಸದ್ಯದಲ್ಲೇ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಿದ್ದು, ಓಲಾ ಫ್ಯೂಚರ್ ಫ್ಯಾಕ್ಟರಿ ಜಗತ್ತಿನಲ್ಲಿ ಮಹಿಳೆಯರೇ ಇರುವ ಮೊದಲ ಆಟೋಮೋಟಿವ್​ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ ಆಗಲಿದೆ ಎಂದಿದ್ದಾರೆ.

               ಇದು ಓಲಾದ ಉಪಕ್ರಮಗಳ ಸರಣಿಯಲ್ಲಿ ಇದು ಮೊದಲನೆಯದಾಗಿದ್ದು, ಮಹಿಳೆಯರಿಗೆ ಆರ್ಥಿಕ ಅವಕಾಶ ಹಾಗೂ ಕಾರ್ಯಶಕ್ತಿ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಂಪೂರ್ಣ ಉತ್ಪಾದನೆ ಹಾಗೂ ಪ್ರತಿ ವಾಹನದ ತಯಾರಿಕೆಯಲ್ಲೂ ಮಹಿಳೆಯರು ಕೌಶಲಗಳನ್ನು ರೂಪಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ನಾವು ಗಣನೀಯ ಹೂಡಿಕೆ ಮಾಡಿದ್ದೇವೆ ಎಂದೂ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries