HEALTH TIPS

'ಬಿ ದಿ ವಾರಿಯರ್'; ಆರೋಗ್ಯ ಇಲಾಖೆಯ ಹೊಸ ಅಭಿಯಾನಕ್ಕೆ ಮುಖ್ಯಮಂತ್ರಿ ಚಾಲನೆ

                                     

               ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ತಡೆಗಟ್ಟುವಿಕೆಗಾಗಿ ಆರೋಗ್ಯ ಇಲಾಖೆಯು ಆರಂಭಿಸಿರುವ 'ಬಿ ದಿ ವಾರಿಯರ್' ಅಭಿಯಾನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ನಿನ್ನೆ ಚಾಲನೆ ನೀಡಿದರು. ಅಭಿಯಾನದ ಲಾಂಛನವನ್ನು ಬಿಡುಗಡೆ ಮಾಡಲಾಗಿದೆ. ಕೊರೋನಾ ಪರಿಶೀಲನಾ ಸಭೆಯ ನಂತರ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

                      ಈ ಅಭಿಯಾನವು ಆತ್ಮರಕ್ಷಣೆ ಅತಿ ಮುಖ್ಯ ಎಂಬ ಸಂದೇಶವನ್ನು ಪ್ರಸರಿಸಲಿದೆ.  ಪ್ರತಿಯೊಬ್ಬರೂ ಕೊರೋನಾದಿಂದ ತಮ್ಮನ್ನು ಉಳಿಸಿಕೊಳ್ಳಬೇಕು ಮತ್ತು ಇತರರಲ್ಲಿ ಸಂದೇಶಗಳನ್ನು ತಲುಪಿಸಬೇಕು. ಸರಿಯಾದ ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈಗಳನ್ನು ಸಾಬೂನು, ನೀರು ಅಥವಾ ಸ್ಯಾನಿಟೈಸರ್‍ನಿಂದ ಸ್ವಚ್ಛಗೊಳಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಎರಡು ಡೋಸ್ ಲಸಿಕೆ ತೆಗೆದುಕೊಳ್ಳುವ ಮೂಲಕ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವುದು ಅಭಿಯಾನದ ಗುರಿಯಾಗಿದೆ. ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಹೇರಲು ಸಾಧ್ಯವಿಲ್ಲ. ಜೀವನ ಮತ್ತು ಜೀವನೋಪಾಯವನ್ನು ಏಕಕಾಲದಲ್ಲಿ ಮುನ್ನಡೆಸುವ ಸವಾಲು ನಮ್ಮೆಲ್ಲರಲ್ಲಿದೆ. ಹಾಗಾಗಿ ಎಲ್ಲರೂ ಜಾಗರೂಕರಾಗಿರಬೇಕು.

                  ಬಿ ದಿ ವಾರಿಯರ್ ಅಭಿಯಾನದ ಮುಖ್ಯ ಗುರಿಗಳು ಮೂರನೇ ತರಂಗದ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಲಸಿಕೆಯನ್ನು ತೀವ್ರಗೊಳಿಸುವುದು. ಸೋಪ್, ಮಾಸ್ಕ್, ಸಾಮಾಜಿಕ ಅಂತರಗಳೆಂಬ ಎಸ್ ಎಂ ಎಸ್ ಆರೋಗ್ಯ ಇಲಾಖೆಯ ಅಧಿಕೃತ ಮಾರ್ಗಸೂಚಿಗಳನ್ನು ಅನುಸರಿಸುವುದು, ರಿವರ್ಸ್ ಕ್ಯಾರೆಂಟೈನ್ ನ್ನು ಮಾತ್ರ ತಿಳಿಸುವುದು ಮತ್ತು ವಯಸ್ಸಾದವರು, ಮಕ್ಕಳು ಮತ್ತು ಒಳರೋಗಿಗಳಿಗೆ ರೋಗ ಹರಡುವುದನ್ನು ತಡೆಗಟ್ಟುವ ಪ್ರಾಮುಖ್ಯತೆಯ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಇದರ ಭಾಗವಾಗಿ, ರಾಜ್ಯದಾದ್ಯಂತ ಪತ್ರಿಕಾ, ದೃಶ್ಯ, ಆಡಿಯೋ, ಸಾಮಾಜಿಕ ಮಾಧ್ಯಮ ಮತ್ತು ಇತರ ವಿಧಾನಗಳ ಮೂಲಕ ಕೊರೋನ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬ ಪ್ರಜೆಯ ಮಹತ್ವ ಮತ್ತು ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸಲು ಸಕ್ರಿಯ ಪ್ರಯತ್ನ ಮಾಡಲಾಗುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries