ಕುಂಬಳೆ: ಬರಹಗಾರ್ತಿ ಸರಸಾ ಕಮ್ಮರಡಿ ಅವರ ಎರಡನೇ ಪುಸ್ತಕ `ನಗು- ನಗ - ನಗಿಸು' ಕುಂಬಳೆಯ ಶೆಟ್ಟಿಗೆದ್ದೆಯ ವೈಷ್ಣವಿ ನಿವಾಸದಲ್ಲಿ ಸೋಮವಾರ ಲೋಕಾರ್ಪಣೆಗೊಂಡಿತು.
ಮುಂಬೈಯ ನಿವೃತ್ತ ಹಿರಿಯ ಎಂಜಿನಿಯರ್ ಕಜೆ ರಾಮ ಭಟ್ ಅವರು ಪುಸ್ತಕ ಲೋಕಾರ್ಪಣೆಗೊಳಿಸಿದರು. ಬಿಳಿನೆಲೆ ಶಾಲೆಯ ನಿವೃತ್ತ ಪ್ರಾಂಶುಪಾಲ ಪಿ.ಕೃಷ್ಣ ಶರ್ಮ ಅವರು ಮಾತನಾಡಿ ದೇಶ ಸುತ್ತಿ ನೋಡು ಕೋಶ ಓದಿ ನೋಡು' ಉಕ್ತಿ ಎಂದಿಗೂ ಸಕಾಲಿಕವಾದುದು. ಓದುವಿಕೆಯಿಂದ ಜ್ಞಾನ ವೃದ್ಧಿಸುತ್ತದೆ. ಬರವಣಿಗೆ ಎಂಬುದು ಖಡ್ಗಕ್ಕೆ ಸಮ, ಜೊತೆಗೆ ಸರಸ ಕಮ್ಮರಡಿ ಅವರು ಅತ್ಯುತ್ತಮ ಬರಹಗಾರರಾಗಿದ್ದು, ಅವರಿಂದ ಇನ್ನೂ ಹೆಚ್ಚಿನ ಕಾದಂಬರಿ ಹೊರಬರಲಿ ಎಂದು ಹಾರೈಸಿದರು.
ಡಾ.ಕೃಷ್ಣ ಭಟ್ ಕಮ್ಮರಡಿ, ಯಂ.ಕೆ. ಎಸ್ ಭಟ್ ನಾಯ್ಕಾಪು, ನರಸಿಂಹ ಭಟ್ ಬಾಳೆಮೂಲೆ, ಯು. ಎಂ. ಭಟ್ ಶಾಂತಿಪ್ಪಳ್ಳ ಶುಭ ಹಾರೈಸಿದರು. ಲೇಖಕಿ ಸರಸ ಕಮ್ಮರಡಿ ಮಾತನಾಡಿ, ಈಗಾಗಲೇ ಒಂದು ಪುಸ್ತಕ ಬಿಡುಗಡೆ ಮಾಡಿದ್ದು, ಇದೀಗ ಬಿಡುಗಡೆ ಮಾಡಿರುವ ಪುಸ್ತಕವು ಬಹಳಷ್ಟು ನಗೆ ಸಂಕಲನಗಳನ್ನು ಹೊಂದಿದೆ ಎಂದರು. ಇನ್ನೊಂದು ಪುಸ್ತಕ ಬಿಡುಗಡೆಗೆ ಸಜ್ಜಾಗಿದ್ದು, ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ. ಪುಸ್ತಕವು ಮಕ್ಕಳ ಕಥೆಗಳು, ಸಣ್ಣ ಕಥೆಗಳನ್ನು ಹೊಂದಿದೆ ಎಂದರು. ಬರವಣಿಗೆಯಲ್ಲಿ ಅತಿಯಾದ ಪ್ರೀತಿಯನ್ನು ಹೊಂದಿದ್ದು ಇನ್ನಷ್ಟು ಪುಸ್ತಕಗಳನ್ನು ಬರೆಯುವುದರೊಂದಿಗೆ ಜನರಿಗೆ ತಲುಪಿಸುವ ಪ್ರಯತ್ನದಲ್ಲಿದ್ದೇನೆ ಎಂದರು. ಲೇಖಕಿಯ ಸಹೋದರರಾದ ಎಸ್. ಶಂಕರನಾರಾಯಣ ಭಟ್ ಸಹೋದರಿಯರಾದ ಗೀತಾ ಭಟ್, ಸುಧಾ ಭಟ್, ಶೀಲಾ ಭಟ್, ಪಾರ್ವತಿ ಭಟ್, ವಿದ್ಯಾ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕಿ ಗೀತಾ ಎಂ. ಭಟ್ ಸ್ವಾಗತಿಸಿ, ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯ ಶಿಕ್ಷಕಿ ವಿದ್ಯಾರತ್ನ ವಂದಿಸಿದರು.