HEALTH TIPS

ದುಬೈಗೆ ಹೊರಟಿದ್ದ ವ್ಯಕ್ತಿಗೆ ಕೋವಿಡ್ ದೃಢ; ವಿಮಾನ ಹತ್ತುವುದನ್ನು ತಡೆದ ಸಿಬ್ಬಂದಿ

                 ಇಂದೋರ್: ದುಬೈಗೆ ತೆರಳಲು ಏರ್ ಇಂಡಿಯಾ ವಿಮಾನ ಹತ್ತಿದ್ದ 26 ವರ್ಷದ ವ್ಯಕ್ತಿಯೊಬ್ಬರ ಕೋವಿಡ್ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಿಮಾನದಿಂದ ಕೆಳಗಿಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                 ನಂತರ ಅವರನ್ನು ಕೋವಿಡ್-19 ರೋಗಿಗಳಿಗಾಗಿ ಸ್ಥಾಪಿಸಲಾದ ಆರೈಕೆ ಕೇಂದ್ರಕ್ಕೆ ಸೇರಿಸಲಾಯಿತು. 'ಕೋವಿಡ್-19 ನಿಯಮಾವಳಿ ಪ್ರಕಾರ, ಬುಧವಾರ ಇಲ್ಲಿನ ದೇವಿ ಅಹಲ್ಯಾಬಾಯಿ ಹೋಲ್ಕರ್ ವಿಮಾನ ನಿಲ್ದಾಣದಲ್ಲಿ ಇಂದೋರ್-ದುಬೈ ವಿಮಾನದ 117 ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಯಿತು. ಅವರಲ್ಲಿ 26 ವರ್ಷದ ವ್ಯಕ್ತಿಗೆ ಕೋವಿಡ್ ದೃಢಪಟ್ಟಿತ್ತು' ಎಂದು ಕೋವಿಡ್-19 ತಡೆಗಟ್ಟುವಿಕೆಯ ನೋಡಲ್ ಅಧಿಕಾರಿ ಡಾ.ಅಮಿತ್ ಮಲಾಕರ್ ಹೇಳಿದ್ದಾರೆ.

ಉದ್ಯೋಗದ ನಿಮಿತ್ತ ಆ ವ್ಯಕ್ತಿ ದುಬೈಗೆ ಹೋಗುತ್ತಿದ್ದರು. ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರಿಂದ ಇಲ್ಲಿನ ಖಾಂಡ್ವಾ ರಸ್ತೆಯಲ್ಲಿರುವ ಕೋವಿಡ್-19 ರೋಗಿಗಳ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

            ಮಧ್ಯಪ್ರದೇಶದಲ್ಲಿ ಸದ್ಯ ಕೋವಿಡ್ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಕುಸಿತ ಕಂಡಿವೆ. ಮಂಗಳವಾರ, ಮಧ್ಯಪ್ರದೇಶದಲ್ಲಿ ಏಳು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7,92,360ಕ್ಕೆ ಏರಿದೆ. ಆದರೆ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 7,81,717 ಜನರು ಈವರೆಗೂ ಚೇತರಿಸಿಕೊಂಡಿದ್ದು, 126 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries