HEALTH TIPS

ಮರ್ಚೆಂಟ್ ನೇವಿ ಅಸೋಸಿಯೇಶನ್ ಚಿಕಿತ್ಸಾ ಧನಸಹಾಯ

                  ಕಾಸರಗೋಡು: ಹಡಗು ಸವಾರರ ರಾಷ್ಟ್ರೀಯ ಸಂಘಟನೆಯಾದ ಮರ್ಚೆಂಟ್ ನೇವಿ ಅಸೋಸಿಯೇಶನ್  125ನೇ ವಾರ್ಷಿಕೋತ್ಸವಗಳ ಅಂಗವಾಗಿ ಕಾಸರಗೋಡು ಜಿಲ್ಲಾ ಮರ್ಚೆಂಟ್ ನೇವಿ ಅಸೋಸಿಯೇಶನ್ ಆಯೋಜಿಸಿದ ವೆಲ್‍ಫೇರ್ ಸದಸ್ಯತನ ಅಭಿಯಾನದಲ್ಲಿ ಚಿಕಿತ್ಸಾ ಧನಸಹಾಯಗಳನ್ನು ವಿತರಿಸಲಾಯಿತು.

                 ವಾಹನ ಅಪಘಾತದಲ್ಲಿ ಗಾಯಗೊಂಡ ಮೇಲ್ಪರಂಬ ನಡಕ್ಕಾಲಿನ ಅಶ್ವತಿ, ಎರಡೂ ಕಿಡ್ನಿಗಳು ನಿಶ್ಚಲಗೊಂಡು ಚಿಕಿತ್ಸೆಯಲ್ಲಿರುವ ಬಾರದ ಋತಿಕ್ ಕೃಷ್ಣನ್ ಎಂಬವರ ಚಿಕಿತ್ಸಾ ನಿಧಿಗಿರುವ ಅಸೋಸಿಯೇಶನ್‍ನ ಧನಸಹಾಯಗಳನ್ನು ಅಸ|ಓಸಿಯೇಷನ್ ನ ಕೇರಳ ಘಟಕ ಕಾರ್ಯದರ್ಶಿ ಜಿ. ವಿನಯಕುಮಾರ್ ಪೈ ಅಭಿಯಾನ ಉದ್ಘಾಟನಾ ವೇದಿಕೆಯಲ್ಲಿ ಚಿಕಿತ್ಸಾ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಇದಲ್ಲದೆ ಕೋವಿಡ್ ರೋಗಿಗಳ ಸತತ ಉಸಿರಾಟ ಸಮಸ್ಯೆ ಎದುರಿಸುವವರಿಗೆ ತಾತ್ಕಾಲಿಕವಾಗಿ ನೀಡಿ ಸಹಾಯ ಮಾಡುವ ಆಕ್ಸಿಜನ್ ಕೋನ್ಸಂಟ್ರೇಟರ್‍ನ ವಿತರಣೋದ್ಘಾಟನೆ ವೇದಿಕೆಯಲ್ಲಿ ನಡೆಯಿತು.

                  ಅಧ್ಯಕ್ಷ ರಾಜೇಂದ್ರನ್ ಮುದಿಯಕ್ಕಾಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ರಮೇಶನ್ ಅಪ್ಪುಡು, ರಾಜೆಶ್ ಚಂದು, ವಿಜಯಕುಮಾರ್ ಮಾಙಡ್, ಜೊತೆ ಕಾರ್ಯದರ್ಶಿ ಮಾಂಸಾಲಿ, ಮುರಳಿ ತಾರ, ಇಬ್ರಾಹಿಂ ಮಲಾಂಕುನ್ನ್, ಸುನಿಲ್ ಕೊಕ್ಕಲ್, ದಿನೇಶನ್ ಕೋಟೆಕಣಿ, ವಿನೋದ್ ಪೊೈನಾಚಿ, ರಾಹುಲ್ ಮಾವುಂಗಾಲ್, ಯೂತ್ ವಿಂಗ್ ಅಧ್ಯಕ್ಷ ಸುಜಿತ್ ಬೇಕಲ, ಉಪಾಧ್ಯಕ್ಷ ಸೂರ್ಯಪ್ರಕಾಶ್ ಯು. ಕೆ., ಕೋಶಾಧಿಕಾರಿ ರತೀಶನ್ ಕುಟ್ಟಿಯಾನ್, ರಕ್ಷಾ|ಧಿಕಾರಿಗಳಾದ ರಾಜೇಂದ್ರನ್, ಪಿ. ಮಧುಸೂದನನ್, ಸಿ. ಬಿ. ವಿಮನ್ಸ್ ವಿಂಗ್ ಕಾರ್ಯದರ್ಶಿ ಸ್ವಪ್ನ ಮನೋಜ್ ಮಾತನಾಡಿದರು. 

                    ಹಡಗು ನೌಕರರ ಮಧ್ಯೆಯೂ ಸಾರ್ವಜನಿಕ ಸಮೂಹದಲ್ಲಿ ಅಸೋಸಿಯೇಶನ್ ನಡೆಸುವ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ನೇತೃತ್ವ ನೀಡಲು ಅಸೋಸಿಯೇಶನ್  ಅಧ್ಯಕ್ಷ ರಾಜೇಂದ್ರನ್ ಮುದಿಯಕ್ಕಾಲ್‍ಗೆ, ಸಂಚಾಲಕ ಸಂತೋಷ್ ತೋರೋತ್, ಪ್ಯಾಸೆಂಜರ್‍ಶಿಪ್ ಕಂಪೆನಿಯಾದ ಕಾರ್ಣಿವಲ್ ಕ್ರೂಸ್‍ಗಾಗಿ ಅಸೋಸಿಯೇಶನ್ ಎಕ್ಸಿಕ್ಯೂಟಿವ್ ಸದಸ್ಯ ವಿನೋದ್ ಪೊೈನಾಚಿ ಹಾಗೂ ವಿನೋದ್ ಕುಮಾರ್ ಪೈ  ಶಾಲು ಹೊದಿಸಿದರು. ಕಾರ್ಯದರ್ಶಿ ಜಯರಾಜ್ ಪಿ. ವಿ. ಸ್ವಾಗತಿಸಿ, ಸಂಚಾಲಕ ಸಂತೋಷ್ ತೋರೋತ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries