ನವದೆಹಲಿ: ಹಾಲಿ ಇರುವ ತೆರಿಗೆ ಹಂತಗಳು ಮತ್ತು ಜಿಎಸ್‌ಟಿಯಿಂದ ವಿನಾಯಿತಿ ಪಡೆದಿರುವ ವಸ್ತುಗಳ ಪರಿಶೀಲನೆ ಹಾಗೂ ಸಂಭಾವ್ಯ ತೆರಿಗೆ ವಂಚನೆಯ ಮೂಲಗಳನ್ನು ಗುರುತಿಸುವ ಜೊತೆಗೆ, ಐಟಿ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯ ವಿವಿಧ ರಾಜ್ಯಗಳ ಹಣಕಾಸು ಸಚಿವರನ್ನೊಳಗೊಂಡ ಎರಡು ಸಮಿತಿಗಳನ್ನು ರಚಿಸಿದೆ.
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರ, ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್, ಬಿಹಾರದ ಉಪ ಮುಖ್ಯಮಂತ್ರಿ ತರ್ಕಿ ಕಿಶೋರ್ ಪ್ರಸಾದ್ ಅವರನ್ನೊಳಗೊಂಡ ಏಳು ಸದಸ್ಯರ ಸಮಿತಿಯು ಎರಡು ತಿಂಗಳಲ್ಲಿ ವರದಿಯನ್ನು ಸಲ್ಲಿಸಲಿದೆ.
ಈ ಸಚಿವರ ಸಮೂಹದ ಸಮಿತಿಯು ತೆರಿಗೆ ಹಂತಗಳನ್ನು ವೈಜ್ಞಾನಿಕವಾಗಿ ನಿಗದಿಪಡಿಸುವ ಕುರಿತು ಪರಾಮರ್ಶಿಸಲಿದೆ. ತೆರಿಗೆ ನಿಗದಿ, ಸ್ಲ್ಯಾಬ್‌ಗಳನ್ನು ವಿಲೀನಗೊಳಿಸುವುದು ಸೇರಿದಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಶಿಫಾರಸು ಮಾಡಲಿದೆ.