ತಿರುವನಂತಪುರಂ: ರಾಜ್ಯದ ಕೊರೋನಾ ಪರಿಸ್ಥಿತಿಯಿಂದಾಗಿ ಕೈದಿಗಳಿಗೆ ನೀಡಲಾಗಿದ್ದ ವಿಶೇಷ ಪೆರೋಲ್ ಅನ್ನು ವಿಸ್ತರಿಸಲಾಗಿದೆ. ಪೆರೋಲ್ ನ್ನು ಸೆಪ್ಟೆಂಬರ್ 21 ರವರೆಗೆ ವಿಸ್ತರಿಸಲಾಗಿದೆ. ಕಾರಾಗೃಹಗಳಲ್ಲಿ ಕೊರೋನಾ ಹರಡುವಿಕೆಯು ಸಂಪೂರ್ಣವಾಗಿ ನಿಯಂತ್ರಣದಲ್ಲಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಈ ಹೊಸ ಆದೇಶವು ನೀಡಲಾಗಿದೆ.
ಈ ಹಿಂದೆ, 65 ವರ್ಷಕ್ಕಿಂತ ಮೇಲ್ಪಟ್ಟ ಗಂಭೀರವಲ್ಲದ ಅಪರಾಧಿಗಳನ್ನು ಕೊರೋನಾ ವ್ಯಾಪಕತೆ ಹಿನ್ನೆಲೆಯಲ್ಲಿ ಹರಡುವುದನ್ನು ತಡೆಯಲು ಪೆರೋಲ್ ಮಾಡಿ ಮನೆಗೆ ಕಳುಹಿಸಲಾಗಿತ್ತು.
ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಪೂಜಾಪುರ ಕೇಂದ್ರ ಕಾರಾಗೃಹ. ಜಿಲ್ಲೆಯ ಕರಾವಳಿ ಪ್ರದೇಶಗಳಂತೆಯೇ, ಸೆರೆಮನೆಗಳಲ್ಲಿ ಕೂಡ ಸಮೂಹಗಳು ರೂಪುಗೊಂಡಿವೆ. ಆದರೆ ಜೈಲಿನ ಅಧಿಕಾರಿಗಳ ಪ್ರಕಾರ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ರೋಗ ಹರಡುವುದನ್ನು ತಡೆಯಲು ಸಂದರ್ಶಕರು ಸೇರಿದಂತೆ ಎಲ್ಲಾ ಕಾರಾಗೃಹಗಳ ಮೇಲೆ ಕಠಿಣ ನಿಬರ್ಂಧಗಳನ್ನು ವಿಧಿಸಲಾಗಿದೆ.
ಏತನ್ಮಧ್ಯೆ, ನಿನ್ನೆ ವಿಯೂರು ಜಿಲ್ಲಾ ಕಾರಾಗೃಹದಲ್ಲಿ 30 ಕೈದಿಗಳಳಿಗೆ ಕೋವಿಡ್ ದೃಢಪಟ್ಟಿತ್ತು. ರೋಗ ಪತ್ತೆಯಾದ 29 ಜನರನ್ನು ಜೈಲಿನಲ್ಲಿರುವ ಸಿ.ಎಫ್.ಎಲ್.ಟಿ.ಸಿ ಗೆ ವರ್ಗಾಯಿಸಲಾಯಿತು. ಒಬ್ಬರನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.