HEALTH TIPS

ಉತ್ತಮ ಚಿಕಿತ್ಸೆಗೆ ಸರ್ಕಾರದ ಜವಾಬ್ದಾರಿ, ಕಾಸರಗೋಡಿಗೆ ಎಐಐಎಂಎಸ್ ಅತ್ಯಗತ್ಯ - ಎನ್ ಎ ನೆಲ್ಲಿಕುನ್ನು

                 ಮುಳ್ಳೇರಿಯ:  ಕಾಸರಗೋಡು ಆರೋಗ್ಯ ವಲಯ ಇತರ ಜಿಲ್ಲೆಗಳೊಂದಿಗೆ ಮುನ್ನಡೆಯಲು ಏಮ್ಸ್ ಅತ್ಯಗತ್ಯ ಮತ್ತು ಎಂಡೋಸಲ್ಫಾನ್ ನಿಂದ ಬಳಲುತ್ತಿರುವವರು ಸೇರಿದಂತೆ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಜವಾಬ್ದಾರಿ ಸರ್ಕಾರಕ್ಕಿದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು. 

               ಕಾಸರಗೋಡಿಗೆ ಮಂಜೂರುಗೊಂಡ ಏಮ್ಸ್ ಆಸ್ಪತ್ರೆ ಯಾವ ಕಾರಣಕ್ಕೂ ಬೇರೆಡೆಗೆ ಸ್ಥಳಾಂತರಗೊಳ್ಳಬಾರದೆಂದು ಬೇಡಿಕೆ ಮುಂದಿರಿಸಿ  ಸೆಪ್ಟೆಂಬರ್ 30 ರಂದು ಕಾಸರಗೋಡು ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಏಮ್ಸ್ ಕ್ರಿಯಾ ಸಮಿತಿ ನಡೆಸುವ ಉಪವಾಸ ಸತ್ಯಾಗ್ರಹದ ಪೂರ್ವಭಾವಿಯಾಗಿ ಕಾಸರಗೋಡು ವಲಯ ಪ್ರಚಾರ ವಾಹನ ಜಾಥಾವನ್ನು ಶನಿವಾರ ಬೋವಿಕ್ಕಾನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 

          ಜಾಥಾ ನಾಯಕ ಕೆ.ಬಿ. ಮುಹಮ್ಮದ್ ಕುಂಞÂ ಅವರಿಗೆ  ಧ್ವಜವನ್ನು ಹಸ್ತಾಂತರಿಸಿ ಉದ್ಘಾಟಿಸಲಾಯಿತು. ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸದಸ್ಯರಾದ ಎಂ ಕುಂಞÂ್ಞಂಬು ನಂಬಿಯಾರ್ ಮತ್ತು ಜಮೀಲಾ ಅಹಮದ್, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಇ ಮೋಹನನ್ ಮತ್ತು ಅನೀಸಾ ಮನ್ಸೂರ್ ಮಲ್ಲ, ವಿವಿಧ ಸಂಘಟನೆಗಳ ಮುಖಂಡರಾದ ಅಶೋಕನ್ ಕಾನತ್ತೂರು, ನಾಸರ್ ಚೆರ್ಕಳ ಮತ್ತು ಅಂಬಲತ್ತರ ಕುಂಞÂ್ಞಕೃಷ್ಣನ್, ಬಿ.ಸಿ.ಕುಮಾರನ್, ಶೆರಿಫ್ ಕೊಡವಂಚಿ, ಬಿ.ಎಂ. ಅಬೂಬಕರ್, ಹಮ್ಜಾ ಚಾಯ್ಸ್, ಮುಸ್ತಫಾ ಬಿಸ್ಮಿಲ್ಲಾ, ಕೆ.ಮಹಮ್ಮದ್ ಕುಂಞïಞÂ, ನಿರ್ದೇಶಕ ಖಮರುನ್ನಿಸಾ ಕಡವತ್, ಶೆರಿಫ್ ಮುಗು, ಪಂಚಾಯತ್ ಸದಸ್ಯರು ಅಬ್ಬಾಸ್ ಕೊಳಚಪ್ಪು, ಅನನ್ಯ ಮತ್ತು ರಮೇಶನ್ ಉಪಸ್ಥಿತರಿದ್ದರು.

                        ಮುಳ್ಳೇರಿಯ, ಅಡೂರು, ನಾಟೆಕಲ್ಲು,  ಮಾರ್ಪನಡ್ಕ, ಬದಿಯಡ್ಕ, ಉಳಿಯತ್ತಡ್ಕ, ಚೌಕಿ ಮತ್ತು ತಳಿಪರಂಬದಲ್ಲಿ ಪ್ರಚಾರ ಜಾಥಾ ಸಂಚರಿಸಿತು.  ಚೆರ್ಕಳದಲ್ಲಿ ಸಮಾರೋಪಗೊಂಡಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries