ಅತ್ಯಂತ ಪೋಷಕಾಂಶಭರಿತ ಹಣ್ಣುಗಳಲ್ಲಿ ಬಾಳೆಹಣ್ಣು ಅತ್ಯಂತ ಪ್ರಮುಖವಾಗಿದೆ. ಇದು 11 ಖನಿಜಗಳು, 6 ಜೀವಸತ್ವಗಳು, ಸಾಕಷ್ಟು ಫೈಬರ್ ಮತ್ತು ಉತ್ತಮ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಅತ್ಯಂತ ಆರೋಗ್ಯಕರ ಹಣ್ಣಾಗಿದೆ. ಆದ್ದರಿಂದಲೇ ಇದು ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ.
ಆದರೆ, ಹೆಚ್ಚಿನ ಜನರಿಗೆ ಹಳದಿ ಬಾಳೆಹಣ್ಣು ಮಾತ್ರ ಗೊತ್ತು, ಕೆಲವರಿಗೆ ಮಾತ್ರ ಕೆಂಪು ಬಾಳೆಹಣ್ಣಿನ ಬಗ್ಗೆ ತಿಳಿದಿದೆ. ಕೆಂಪು ಬಾಳೆಹಣ್ಣು, ಸಾಮಾನ್ಯ ಬಾಳೆಹಣ್ಣುಗಿಂತ ಹೆಚ್ಚು ಸಿಹಿಯಾಗಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ ಇದು ನಿಮ್ಮ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳು ಎಂತಹುದು.
ಮೂತ್ರಪಿಂಡಗಳಿಗೆ ಪ್ರಯೋಜನಕಾರಿ : ಪೊಟ್ಯಾಸಿಯಮ್ ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಬಾಳೆಹಣ್ಣಿನಲ್ಲಿ ಸೃದ್ಧವಾಗಿದ್ದು, ಜೊತೆಗೆ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೂಳೆಯ ಆರೋಗ್ಯಕ್ಕೆ ಉತ್ತಮವಾಗಿದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು: ಕೆಂಪುಬಾಳೆಹಣ್ಣು ವಿಟಮಿನ್ ಸಿ ಹಾಗೂ ಬಿ 6 ನ ಉತ್ತಮ ಮೂಲವಾಗಿದ್ದು, ಇದು ಒಂದು ಆರೋಗ್ಯಕರ ನಿರೋಧಕ ವ್ಯವಸ್ಥೆಯನ್ನು ನಿರ್ಮಿಸಲು ಅವಶ್ಯಕವಾಗಿವೆ. ಒಂದು ಸಣ್ಣ ಕೆಂಪು ಬಾಳೆಹಣ್ಣಿನಲ್ಲಿ 9 ಪ್ರತಿಶತ ವಿಟಮಿನ್ ಸಿ ಮತ್ತು 28 ಪ್ರತಿಶತದಷ್ಟು ಬಿ 6 ಇದ್ದು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.ರಕ್ತವನ್ನು ಸ್ವಚ್ಛಗೊಳಿಸುವುದು: ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ಅಧಿಕವಾಗಿದ್ದು, ಇದು ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಾಯ ಮಾಡುವುದು: ಕೆಂಪು ಬಾಳೆಹಣ್ಣಿನಲ್ಲಿ ಹೆಚ್ಚಿನ ಫೈಬರ್ ಇದ್ದು, ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಒಂದು ಕೆಂಪು ಬಾಳೆಹಣ್ಣಿನಲ್ಲಿ ಕೇವಲ 90 ರಿಂದ 100 ಕ್ಯಾಲೊರಿಗಳು ಮತ್ತು ಹೆಚ್ಚಿನ ಫೈಬರ್ ಇರುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡಿ ತೂಕ ಇಳಿಸುವ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡಬಹುದು.
ಶಕ್ತಿ ನೀಡುವುದು: ಫ್ರಕ್ಟೋಸ್, ಸುಕ್ರೋಸ್ ಮತ್ತು ಗ್ಲೂಕೋಸ್ ಕೆಂಪು ಬಾಳೆಹಣ್ಣಿನಲ್ಲಿ ಕಂಡುಬರುವ ಮೂರು ರೀತಿಯ ನೈಸರ್ಗಿಕ ಸಕ್ಕರೆಗಳಾಗಿವೆ. ಇವುಗಳಲ್ಲಿ ಕೆಲವು ಸಕ್ಕರೆಗಳು ಬೇಗನೆ ಒಡೆದರೆ, ಇತರವುಗಳು ನಿಧಾನವಾಗಿ ಒಡೆಯಲ್ಪಡುತ್ತವೆ. ಆದ್ದರಿಂದ ಈ ಹಣ್ಣನ್ನು ತಿನ್ನುವುದರಿಂದ ನಿಮಗೆ ತಕ್ಷಣ ಚೈತನ್ಯ ಸಿಗುವುದು, ದಿನವಿಡೀ ಶಕ್ತಿಯುತವಾಗಿರುವಂತೆ ಮಾಡುತ್ತದೆ. ಅದಕ್ಕಾಗಿಯೇ ಇದು ಉತ್ತಮ ಉಪಹಾರ ಆಯ್ಕೆಯಾಗಿದೆ.
ದೃಷ್ಟಿ ಸುಧಾರಿಸುವುದು: ಕಣ್ಣಿನ ದೃಷ್ಟಿ ವಿಚಾರಕ್ಕೆ ಬಂದಾಗ, ಅದು ದುರ್ಬಲವಾಗುವವರೆಗೆ ನಾವು ಅದನ್ನು ಲಘುವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಪ್ರತಿನಿತ್ಯ ಕೆಂಪು ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಸುಧಾರಣೆಯಾಗುವುದು ಏಕೆಂದರೆ ಅವುಗಳು ವಿಟಮಿನ್ ಎ ಯನ್ನು ಹೊಂದಿರುತ್ತವೆ, ಇದು ಕಣ್ಣುಗಳು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾಗಿರುತ್ತದೆ.
ಕೆಂಪು ಬಾಳೆಹಣ್ಣನ್ನು ಸೇವಿಸುವ ವಿಧಾನ: ಕೆಂಪು ಬಾಳೆಹಣ್ಣನ್ನು ತಾಜಾ ತಿನ್ನಲು ರುಚಿಕರವಾಗಿರುತ್ತದೆ, ಆದರೆ ಬೇಯಿಸಿದಾಗ ಅಥವಾ ಹುರಿದಾಗ ಅದು ಇನ್ನೂ ರುಚಿಯಾಗಿರುತ್ತದೆ. ನಿಮಗೆ ಸಿಹಿ ಇಷ್ಟವಿದ್ದರೆ, ಈ ಹಣ್ಣುಗಳನ್ನು ಸೇಬುಗಳು ಅಥವಾ ನಿಂಬೆಹಣ್ಣು ಮತ್ತು ಮೊಸರಿನಂತಹ ಸಿಟ್ರಸ್ ಹಣ್ಣುಗಳೊಂದಿಗೆ ಜೋಡಿಸಿ. ಇದು ಹಂದಿಮಾಂಸ ಅಥವಾ ಚಿಕನ್, ಕಪ್ಪು ಬೀನ್ಸ್, ಕ್ರೀಮ್ ಮತ್ತು ಮೆಣಸಿನಕಾಯಿಗಳಂತಹ ರುಚಿಕರವಾದ ಭಕ್ಷ್ಯಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಕೆಂಪು ಬಾಳೆಹಣ್ಣನ್ನು ರಾತ್ರಿ ತಿನ್ನಬಹುದೇ? ಕೆಂಪು ಬಾಳೆಹಣ್ಣುನ್ನು ರಾತ್ರಿ ತಿಂದರೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ, ಆಯುರ್ವೇದದ ಪ್ರಕಾರ, ಬಾಳೆಹಣ್ಣು ಮ್ಯೂಕೋಸ್ ಅನ್ನು ಉತ್ಪಾದಿಸಲಿದ್ದು, ಗಂಟಲಿಗೆ ಕಿರಿಕಿರಿಯುಂಟುಮಾಡುತ್ತದೆ. ಜೊತೆಗೆ ಇದು ಹೆವಿ ಆಹಾರವಾಗಿದ್ದು, ಜೀರ್ಣವಾಗಲು ಹೆಚ್ಚು ಸಮಯತೆಗೆದುಕೊಳ್ಳಬಹುದು.