ಕೊಚ್ಚಿ: ಕೊಚ್ಚಿ ನಿವಾಸಿ 26ರ ಹರೆಯದ ಅಕ್ಷಮಾ ಪ್ರದೀಪ್ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ನಗರದ ವೆಂಡುರುತಿ ಸೇತುವೆಯಿಂದ ಹಾರಿದ್ದಳು. ಇದು ಸೇತುವೆಯನ್ನು ಹಾದುಹೋಗುತ್ತಿದ್ದ ನೌಕಾದಳ ಗಸ್ತುಪಡೆಯ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿತ್ತು.
ಪೆಂಡುರುತಿ ಸೇತುವೆಯಿಂದ ಒಂದಷ್ಟು ದೂರದಲ್ಲಿ ನದಿ ಸಮುದ್ರವನ್ನು ಸೇರುತ್ತಲಿತ್ತು. ಯುವತಿ ನೀರಿನೊಂದಿಗೆ ಸಮುದ್ರದತ್ತ ಸಾಗುವುದನ್ನು ಕಂಡ ಇಬ್ಬರು ನೌಕಾದಳ ಸಿಬ್ಬಂದಿ ಒಡನೆಯೇ ಪ್ರಾಣದ ಹಂಗು ತೊರೆದು ನೀರಿಗೆ ಹಾರಿದ್ದರು.
ನೀರಿನ ಸೇಳೆತ ತೀವ್ರವಾಗಿದ್ದರೂ ಲೆಕ್ಕಿಸದೇ ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸುವಲ್ಲಿ ಇಬ್ಬರೂ ಯಶಸ್ವಿಯಾಗಿದ್ದಾರೆ. ಯುವತಿಯನ್ನು ನೌಕಾದಳದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.