HEALTH TIPS

ರಾಷ್ಟ್ರೀಯ ಸಂತ ಕವಿ ಕನಕ ಸಂಶೋಧನ ಕೆಂದ್ರಕ್ಕೆ ಧನಂಜಯ ಕುಂಬ್ಳೆ ಸಹಿತ ಐವರ ನೇಮಕ

            ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ   ಸೇರಿದಂತೆ ಐದು ಮಂದಿಯನ್ನು ಕರ್ನಾಟಕ ಸರಕಾರದ ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ  ಕಾರ್ಯಾನುಷ್ಠಾನ ಮಂಡಳಿಗೆ  ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

                 ಈ ಕುರಿತು ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ  ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ  ಹಾಗೂ ಕಾರ್ಯಕ್ರಮಗಳ ಅನುಷ್ಟಾನಗಳ ದೃಷ್ಠಿಯಿಂದ ಕಾರ್ಯಾನುಷ್ಠಾನ ಮಂಡಳಿಗೆ ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸಮಿತಿಯನ್ನ ಪುನರ್ ರಚಿಸಿ ಆದೇಶ ಹೊರಡಿಸಿದ್ದಾರೆ.

             ಇತರೆ ರಾಯಚೂರಿನ ಡಾ. ಜಯಲಕ್ಷ್ಮಿ ಮಂಗಳಮೂರ್ತಿ, ಮೈಸೂರಿನ ಅ.ಮ. ಭಾಸ್ಕರ್, ಮೈಸೂರಿನ ಜ್ಯೋತಿ ಶಂಕರ್,  ಬೆಂಗಳೂರಿನ ಡಾ. ಎನ್.ಆರ್ ಲಲಿತಾಂಬ, ಶಿವಮೊಗ್ಗದ ಡಾ. ಶುಭ ಮರವಂತೆ ಅವರನ್ನ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗಿದೆ.

                   ಧನಂಜಯ ಕುಂಬ್ಳೆ ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾಗಿ, ಪ್ರಸಾರಾಂಗದ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಕಾಸರಗೋಡು ಜಿಲ್ಲೆಯ ಕುಂಬಳೆಯವರಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries