HEALTH TIPS

ಕೊಚ್ಚಿಯಿಂದ ವಾರಾಣಸಿವರೆಗೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಿಸಿದ IRCTC

                ನವದೆಹಲಿ: ಭಾರತೀಯ ರೈಲ್ವೆಯು ಕೊಚ್ಚಿಯಿಂದ ವಾರಾಣಸಿಗೆ ಪ್ರವಾಸವನ್ನು ಆಯೋಜಿಸುತ್ತಿದೆ. ಪ್ರವಾಸವು ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದ್ದು, 28,755 ರೂ.ವೆಚ್ಚ ತಗುಲಲಿದೆ.

          ಕೊಚ್ಚಿ-ವಾರಾಣಸಿ: ಮೊದಲ ದಿನ ಕೊಚ್ಚಿಯಿಂದ ವಾರಾಣಸಿಗೆ ಪ್ರಯಾಣವಿರಲಿದೆ. ಮಧ್ಯಾಹ್ನ ಹೋಟೆಲ್‌ಗೆ ತೆರಳಲಿದ್ದಾರೆ. ಸಂಜೆಯಷ್ಟೊತ್ತಿಗೆ ಗಂಗಾ ಆರತಿಯನ್ನು ನೋಡುವುದಾದರೆ ಅಲ್ಲಿಯೇ ಉಳಿದುಕೊಳ್ಳಬಹುದಾಗಿದೆ.

           ಎರಡನೇ ದಿನ: ಬೆಳಗ್ಗೆಯ ಉಪಾಹಾರ ಮುಗಿಸಿ ವಾರಾಣಸಿ ನಗರವನ್ನು ಸುತ್ತುಹಾಕಲಾಗುತ್ತದೆ, ಕಾಶಿ ವಿಶ್ವನಾಥ ದೇವಸ್ಥಾನ, ಅನ್ನಪೂರ್ಣ ದೇವಸ್ಥಾನಕ್ಕೆ ತೆರಳಿ ಮಧ್ಯಾಹ್ನ ಊಟದ ಬಳಿಕ ಮತ್ತೆ ವಾರಾಣಸಿಯ ಇನ್ನಷ್ಟು ಸ್ಥಳಗಳನ್ನು ವೀಕ್ಷಿಸಲಾಗುತ್ತದೆ. ಅಂದು ಅಲ್ಲಿಯೇ ಉಳಿಯಬೇಕಾಗುತ್ತದೆ.

ಮೂರನೇ ದಿನ ಅಲಹಾಬಾದ್‌ಗೆ ತೆರಳಲಿದ್ದಾರೆ, ಅಲಹಾಬಾದ್‌ ಫೋರ್ಟ್, ಪಾತಾಳಪುರಿ ದೇವಸ್ಥಾನಕ್ಕೆ ತೆರಳಬಹುದು. ನಾಲ್ಕನೇ ದಿನ: ಅಲಹಾಬಾದ್-ಅಯೋಧ್ಯೆ-ವಾರಾಣಸಿ, ನಾಲ್ಕನೇ ದಿನ ಬೆಳಗ್ಗೆ ರಾಮಜನ್ಮ ಭೂಮಿ, ಕನಕ ಭವನ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳನ್ನು ತೋರಿಸಲಾಗುತ್ತದೆ. ಅಂದೇ ಪ್ರವಾಸವು ಮುಕ್ತಾಯಗೊಳ್ಳಲಿದೆ.

            ಐದನೇ ದಿನ ಬೆಳಗಿನ ತಿಂಡಿ ಮುಗಿಸಿ ಹೋಟೆಲ್‌ನಿಂದ ಹೊರಬರಬೇಕು ಅಲ್ಲಿಂದ ಕೊಚ್ಚಿಗೆ ಕರೆತರಲಾಗುತ್ತದೆ. ಪ್ರವಾಸವನ್ನು ಇಂಡಿಗೋ ಏರ್‌ಲೈನ್‌ನ ಎಕಾನಮಿ ಕ್ಲಾಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತದೆ.

             ಈ ಪ್ಯಾಕೇಜ್ ವಾರಾಣಸಿಯಲ್ಲಿ ಮೂರು ದಿನ ಹೋಟೆಲ್‌ನಲ್ಲಿ ತಂಗುವಿಕೆ, ತಿಂಡಿ, ಊಟ, ಅಲಹಾಬಾದ್‌ನಲ್ಲಿ ಒಂದು ರಾತ್ರಿ ಉಳಿಯುವಿಕೆ ಸೇರಿರುತ್ತದೆ.

          ಅಯೋಧ್ಯಾ ನಗರವು ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳ. ಅಯೋಧ್ಯಾ ಪ್ರವಾಸೋದ್ಯವು ಆದ್ಯಾತ್ಮಿಕ ಮನಸ್ಸುಗಳಿಗೆ ಖುಷಿ ನೀಡಲು ಸಾಕಷ್ಟು ಯಾತ್ರಾ ಸ್ಥಳಗಳನ್ನು ಹೊಂದಿದೆ.

ಕೆಲವೊಂದು ಪ್ರಮುಖ ಮಂದಿರಗಳಲ್ಲಿ ನಾಗೇಶ್ವರನಾಥ ಮಂದಿರವೂ ಒಂದು. ಇದನ್ನು ರಾಮನ ಮಗ ಕುಶ ನಿರ್ಮಿಸಿದನೆಂಬ ಪ್ರತೀತಿಯಿದೆ. ಚಕ್ರ ಹರ್ಜಿ ವಿಷ್ಣು ಮಂದಿರ, ರಾಮಾಯಣವನ್ನು ಮತ್ತೆ ಬರೆದ ತುಳಸಿದಾಸ್ ಹೆಸರಿನಲ್ಲಿ ಸರ್ಕಾರ ರಚಿಸಿರುವ ತುಳಸಿ ಸ್ಮಾರಕ ಭವನವಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಸ್ಥಳದಲ್ಲೇ ರಾಮಜನ್ಮಭೂಮಿಯಿದೆ.

          ಕನಕ ಭವನದಲ್ಲಿ ರಾಮ ಮತ್ತು ಸೀತೆ ಸ್ವರ್ಣ ಕಿರೀಟಗಳನ್ನು ಧರಿಸಿದ ಚಿತ್ರಗಳನ್ನಿಡಲಾಗಿದೆ. ಇಲ್ಲೇ ಹನುಮಾನ್ ಗರ್ಹಿ ಇದ್ದು, ಇದು ನಾಲ್ಕು ಅಂಚುಗಳನ್ನು ಹೊಂದಿರುವ ಕೋಟೆಯ ಪ್ರತೀ ಮೂಲೆಯಲ್ಲಿ ವೃತ್ತಾಕಾರದ ಕೊತ್ತಲಗಳಿರುವ ರಚನೆಯಾಗಿದೆ. ಶ್ರೀರಾಮನ ತಂದೆ ರಾಜ ದಶರಥನ ಹೆಸರಿನಲ್ಲಿ ದಶರಥ ಭವನ, ಶ್ರೀರಾಮ ಅಶ್ವಮೇಧ ಯಾಗ ನಡೆಸಿದ ತ್ರೇತಾ-ಕೆ-ಠಾಕೂರ್ ಪ್ರದೇಶವೂ ಇಲ್ಲಿದೆ.

            ಮದುವೆ ಬಳಿಕ ರಾಮನಿಗಾಗಿ ಸೀತೆ ಮೊದಲ ಬಾರಿ ಅಡುಗೆ ಮಾಡಿದ ಸ್ಥಳ ಸೀತಾ ಕಿ ರಸೋಯಿ ರಾಮಜನ್ಮಭೂಮಿ ಮಂದಿರದ ಸಮೀಪದಲ್ಲೇ ಇದೆ. ರಾಮ್ ಕಿ ಪೈದಿ, ಸರಾಯು ನದಿ ಸ್ನಾನ ಘಟ್ಟಕ್ಕೂ ಭೇಟಿ ನೀಡಿ. ಹಿಂದೆ ಬೌದ್ಧ ವಿಹಾರವಾಗಿದ್ದ ಮಣಿ ಪರ್ಬತ್ ಈಗ ಹಿಂದೂ ದೇಗುಲವಾಗಿ ಈ ಪ್ರದೇಶದಲ್ಲಿದೆ. ಇದರೊಂದಿಗೆ ನಗರದ ಹಲವಾರು ಅದ್ಭುತ ವೀಕ್ಷಣೆಗಳನ್ನು ಆನಂದಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries