ಕಾಸರಗೋಡು: ಕೋವಿಡ್ 19 ರೋಗಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿವಾರ ನಡೆಸುವ ಇನ್ ಫೆಕ್ಷನ್ ಜನಸಂಖ್ಯಾ ಗಣತಿ (ಡಬ್ಲ್ಯೂ.ಐ.ಪಿ.ಆರ್.) 10ಕ್ಕಿಂತ ಮೇಲ್ಪಟ್ಟು ಇರುವ ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ 4 ವಾರ್ಡ್ ಗಳನ್ನು ಅ.19ರಿಂದ 25 ವರೆಗಿನ ಅವಧಿಗೆ ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಿಸಿ, ಲಾಕ್ ಡೌನ್ ಆದೇಶವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಪ್ರಕಟಿಸಿದ್ದಾರೆ.
ಕಂಟೈನ್ಮೆಂಟ್ ಝೋನ್ ಗಳು:
ನೀಲೇಶ್ವರ ನಗರಸಭೆ: ವಾರ್ಡ್ 8-ಡಬ್ಲ್ಯೂ.ಐ.ಪಿ.ಆರ್. 10.97.
ಕಯ್ಯೂರು-ಚೀಮೇನಿ : ವಾರ್ಡ್ 10-ಡಬ್ಲೂ.ಐ.ಪಿ.ಆರ್. 22.10.
ವೆಸ್ಟ್ ಎಳೆರಿ: ವಾರ್ಡ್ 10- ಡಬ್ಲೂ.ಐ.ಪಿ.ಆರ್. 14.44.
ಬೇಡಡ್ಕ : ವಾರ್ಡ್ 10-ಡಬ್ಲೂ.ಐ.ಪಿ.ಆರ್. 14.23.
ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳು:
5 ಕ್ಕಿಂತ ಅಧಿಕ ಆಕ್ಟಿವ್ ಕೇಸುಗಳಿರುವ ಒಂದು ಪ್ರದೇಶವನ್ನು ಕೇಂದ್ರೀಕರಿಸಲಾಗಿರುವ ವೆಸ್ಟ್ ಎಳೆರಿ ಗ್ರಾಮ ಪಂಚಾಯತ್ ನ 9ನೇ ವಾರ್ಡ್ ಕುಟ್ಟಿತ್ತಾನಿ ಪ್ರದೇಶವನ್ನು ಅ.19 ರಿಂದ 25 ವರೆಗಿನ ಅವಧಿಗೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ.
ಕಟ್ಟುನಿಟ್ಟುಗಳಲ್ಲಿ ಹೆಚ್ಚುವರಿ ಸಡಿಲಿಕೆಗೆ ರಾಜ್ಯ ಸರಕಾರದ ತೀರ್ಮಾನಗಳು
ಕಾಸರಗೋಡು, ಅ.18: ಕೊರೋನಾ ಪ್ರತಿರೋಧ ಕಟ್ಟುನಿಟ್ಟುಗಳಲ್ಲಿ ರಾಜ್ಯ ಸರಕಾರ ಕೆಲವು ಹೆಚ್ಚುವರಿ ಕಟ್ಟುನಿಟ್ಟುಗಳನ್ನು ಸಡಿಲಗೊಳಿಸಿದೆ.
ಮ್ಯೂಸಿಯಂ, ಸ್ಮಾರಕ ಕೇಂದ್ರಗಳಿಗೆ 2021 ಅ.21ರಿಂದ ಪ್ರವೇಶಾತಿಗೆ ಅನುಮತಿಯಿದೆ. ಎರಡು ಡೋಸ್ ವಾಕ್ಷಿನ್ ಸವೀಕರಿಸಿದ ಮಂದಿಗೆ ಮಾತ್ರ ಈ ಪ್ರವೇಶಾತಿ ಇರುವುದು. ಈ ಸಂಸ್ಥೆಗಳ ಸಿಬ್ಬಂದಿ ಕಟ್ಟಡಯವಾಗಿ ಎರಡು ಡೋಸ್ ಲಸಿಕೆ ಸ್ವೀಕರಿಸಿರಬೇಕು.
ಕೋವಿಡ್ ನಿಯಂತ್ರಣ ಲಸಿಕೆಯ ಎರಡು ಡೋಸ್ ಈ ವರೆಗೆ ಸ್ವೀಕರಿಸದೇ ಇರುವ ಮಂದಿ, 18 ವರ್ಷ ಪೂರ್ಣಗೊಳ್ಳದೇ ಇರುವ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗೆ ನೇರವಾಗಿ ಹಾಜರಾಗಲು ಅನುಮತಿಯಿದೆ. ಆದರೆ ಇವರ ಹೆತ್ತವರು ಎರಡು ಡೋಸ್ ಲಸಿಕೆ ಸ್ವೀಕರಿಸಿಬೇಕು ಎಂಬ ಬಗ್ಗೆ ಕಾಲೇಜು ಅಧಿಕಾರಿಗಳು ಖಚಿತಪಡಿಸಬೇಕು.