ಮುಂಬೈ: ಈ ವರ್ಷ ಭಾರತ 179 ಮಂದಿ ಸೂಪರ್ ರಿಚ್ ವ್ಯಾಪ್ತಿಗೆ ಬಂದಿದ್ದು, ಅದಾನಿ ಸಮೂಹದ ಗೌತಮ್ ಅದಾನಿ ವಾರ್ಷಿಕ 3,65700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಅಥವಾ ದಿನವೊಂದಕ್ಕೆ 1,000 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಸಂಪಾದಿಸಿದ್ದಾರೆ.
ಭಾರತದಲ್ಲಿನ ಸೂಪರ್ ರಿಚ್ ಗಳ ಸಂಖ್ಯೆ 1,000 ನ್ನು ದಾಟಿದೆ ಎಂದು ಸೆ.30 ರಂದು ಪ್ರಕಟಗೊಂಡ ಹುರುನ್ ಇಂಡಿಯಾ-ಐಐಎಫ್‌ಎಲ್ ಶ್ರೀಮಂತ ಪಟ್ಟಿ ಮೂಲಕ ತಿಳಿದುಬಂದಿದೆ.
ಭೌಗೋಳಿಕವಾಗಿ ಐದು ನಗರಗಳು ಸೂಪರ್ ರಿಚ್ ಗಳ ವಾಸಸ್ಥಾನಕ್ಕೆ ಸೇರ್ಪಡೆಯಾಗಿದ್ದು, ಸೂಪರ್ ರಿಚ್ ನಗರಳ ಸಂಖ್ಯೆ 119 ಕ್ಕೆ ಏರಿಕೆಯಾಗಿದೆ ಹಾಗೂ ಈ 1007 ವ್ಯಕ್ತಿಗಳು 2021 ರಲ್ಲಿ ಶೇ.51 ರಷ್ಟು ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ.
ಈ ವರ್ಷ ಕೊರೋನಾ ಸಾಂಕ್ರಾಮಿಕದ ಅಂಗವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದರೆ ಇತ್ತ ಸರಾಸರಿ ಶೇ.25 ರಷ್ಟು ಸಂಪತ್ತು ಏರಿಕೆಯಾಗಿದೆ.
ಹುರುನ್ ಇಂಡಿಯಾ-ಐಐಎಫ್‌ಎಲ್ ವರದಿಯ ಪ್ರಕಾರ, 1,007 ರ ಮಂದಿಯ ಪೈಕಿ 13 ಮಂದಿ 1,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಂಪತ್ತು ಹೊಂದಿರುವ ದೇಶದಲ್ಲಿ 1 ಲಕ್ಷ ಕೋಟಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದು,
ಮುಖೇಶ್ ಅಂಬಾನಿ 7,18,000 ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಸತತ 10ನೇ ವರ್ಷವೂ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದು 2020 ರಲ್ಲಿ ಶೇ.9 ರಷ್ಟು ಮಾತ್ರ ಏರಿಕೆಯಾಗಿದೆ. ನಂತರದ ಸ್ಥಾನದಲ್ಲಿ ಅದಾನಿ ಕುಟುಂಬ ಇದ್ದು 5,05,900 ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದು, 1,40,200 ಕೋಟಿ ರೂಪಾಯಿಗಳಿಂದ ಶೇ.261 ರಷ್ಟು ಏರಿಕೆ ಕಂಡಿದೆ. ಈ ಮೂಲಕ ಅದಾನಿ ಏಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಮೂರನೇ ಸ್ಥಾನದಲ್ಲಿ ಹೆಚ್ ಸಿಎಲ್ ನ ಶಿವ್ ನಾದರ್ ಹಾಗೂ ಕುಟುಂಬದವರಿದ್ದು 2,36,600 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು ಶೇ.67 ರಷ್ಟು ಏರಿಕೆಯಾಗಿದೆ.