ತಿರುವನಂತಪುರಂ: ಕೇರಳವು ಪೆಟ್ರೋಲಿಯಂ ದರ 100 ರೂ. ದಾಟಿದ ಹನ್ನೆರಡನೆಯ ರಾಜ್ಯವಾಗಿ ಹೊರಹೊಮ್ಮಿದೆ. ತಿರುವನಂತಪುರಂನ ಪಾರಶಾಲಾ, ವೆಲ್ಲಾರ ಮತ್ತು ಕರಕೋಣಂ ಪ್ರದೇಶಗಳಲ್ಲಿ ಡೀಸೆಲ್ ಬೆಲೆ ಇಂದು 38 ಪೈಸೆ ಏರಿಕೆಯಾಗಿದೆ. ಇಂದಿನ ಬೆಲೆ 100 ರೂಪಾಯಿ 8 ಪೈಸೆ.
ತಿರುವನಂತಪುರಂನಲ್ಲಿ, ಡೀಸೆಲ್ ಬೆಲೆ 99.83 ರೂ. ಇಡುಕ್ಕಿ ಜಿಲ್ಲೆಯ ಕೆಲವು ಪಂಪ್‌ಗಳಲ್ಲಿ ಡೀಸೆಲ್ ಬೆಲೆ 100 ರೂ. ಇದೇ ವೇಳೆ, ಪೆಟ್ರೋಲ್ ಬೆಲೆ ಇಂದು 30 ಪೈಸೆ ಏರಿಕೆಯಾಗಿದೆ. ಕೊಚ್ಚಿಯಲ್ಲಿ ಒಂದು ಲೀಟರ್ ಡೀಸೆಲ್ ಬೆಲೆ 97.90 ರೂ. ಅಗಿದೆ.
ಕೊಚ್ಚಿಯಲ್ಲಿ ಪೆಟ್ರೋಲ್ ಬೆಲೆ 104 ರೂ 35 ಪೈಸೆ. ಆಗಿದೆ. ಕೋಝಿಕ್ಕೋಡ್ ನಲ್ಲಿ ಪೆಟ್ರೋಲ್ ಬೆಲೆ 104.61 ರೂ ಮತ್ತು ಡೀಸೆಲ್ ಬೆಲೆ 98.20 ರೂ. ಇದೆ. ಡೀಸೆಲ್ ಬೆಲೆಯನ್ನು 10 ತಿಂಗಳಲ್ಲಿ ಪ್ರತಿ ಲೀಟರ್‌ಗೆ 19.63 ರೂ. ಏರಿಕೆಯಾಗಿದೆ. ಕಳೆದ 16 ದಿನಗಳಲ್ಲಿ ಡೀಸೆಲ್ 3.85 ರೂ.ಏರಿಕೆಯಾಗಿದೆ. ನಾಲ್ಕು ತಿಂಗಳ ಹಿಂದೆ ಕೇರಳದಲ್ಲಿ ಪೆಟ್ರೋಲ್ ಬೆಲೆ 100 ರೂ. ಸನಿಹದಲ್ಲಿ ಇತ್ತು.