HEALTH TIPS

ನ.11ವರೆಗೆ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿಮಟ್ಟ 130.5 ಅಡಿಗೆ: ಸುಪ್ರೀಂಕೋರ್ಟ್ ಆದೇಶ‌

               ನವದೆಹಲಿ :ಅಣೆಕಟ್ಟು ಮೇಲ್ವಿಚಾರಣಾ ಸಮಿತಿಯ ಶಿಫಾರಸಿನಂತೆ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವನ್ನು ನವೆಂಬರ್ 11ರವರೆಗೆ 130.5 ಅಡಿವರೆಗೆ ಕಾಪಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆಯ ಬಗ್ಗೆ ಕೇರಳದ ಕೆಲವು ನಿವಾಸಿಗಳು ಸಲ್ಲಿಸಿದ ಅರ್ಜಿಯ ವಿಚಾರಮೆಯನ್ನು ನವೆಂಬರ್ 11ರಂದು ನಡೆಸಲಾಗುವುದು.

            ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಣೆಕಟ್ಟಿನ ನೀರು ಅಪಾಯಕಾರಿ ಮಟ್ಟಕ್ಕೆ ಏರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಕೋತಮಂಗಲಂ ಬ್ಲಾಕ್ ಪಂಚಾಯತ್ನ ಪದಾಧಿಕಾರಿಗಳು ಹಾಗೂ ಜೋ ಜೋಸೆಫ್ ಎಂಬವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಈ ಆದೇಶ ನೀಡಿದೆ.

            126 ವರ್ಷಗಳಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟು ದುರ್ಬಲವಾಗಿರುವುದರಿಂದ ಅದನ್ನು ತೆಗೆದುಹಾಕಿ, ಹೊಸ ಅಣೆಕಟ್ಟನ್ನು ನಿರ್ಮಿಸಬೇಕೆಂದು ಕೇರಳ ಸರಕಾರವು ನ್ಯಾಯಾಲಯಕ್ಕೆ ಟಪ್ಪಣಿ ಪತ್ರವೊಂದನ್ನು ಸಲ್ಲಿಸಿತು.

             ''ಅಣೆಕಟ್ಟಿನ ಜಲಮಟ್ಟವನ್ನು 139.5 ಅಡಿಯಲ್ಲಿರಿಸಬೇಕೆಂಬ ಅಣೆಕಟ್ಟಿನ ಮೇಲ್ವಿಚಾಣಾ ಸಮಿತಿಯ ಶಿಫಾರಸನ್ನು ನಾವು ಒಪ್ಪಿಕೊಳ್ಳುತ್ತೇವೆ ಹಾಗೂ ಮುಂದಿನ ವಿಚಾರಣೆಯ ದಿನಾಂ(ನ.11)ದವರೆಗೂ ಅದು ಮುಂದುವರಿಯಲಿದೆ'' ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವ ನ್ಯಾಯಪೀಠ ತಿಳಿಸಿತು. ವಿವಿಧ ದಿನಾಂಕಗಳಲ್ಲಿ ಕಾಪಾಡಿಕೊಳ್ಳಬೇಕಾದ ನೀರಿನ ಮಟ್ಟವನ್ನು ಸೂಚಿಸುವ 'ರೂಲ್ ಕರ್ವ್' ಅನ್ನು ಹಾಗೂ ಸಮಿತಿಯ ವರದಿಯ ಕುರಿತ ಆಕ್ಷೇಪಗಳನ್ನು ಸಲ್ಲಿಸುವಂತೆಯೂ ಅದು ಸೂಚಿಸಿತು.
                        ಕೇರಳ ಸರಕಾರದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಜೈದೀಪ್ ಗುಪ್ತಾ ಅವರು, ತಮಿಳುನಾಡು ಸರಕಾರದ ಪ್ರಸ್ತಾವನೆ ಮಾಡಿರುವಂತೆ ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವನ್ನು 142 ಅಡಿಯಲ್ಲಿ ಉಳಿಸಿಕೊಳ್ಳುವುದು ಸುರಕ್ಷಿತವಲ್ಲವೆಂದು ಹೇಳಿದರು. ಮುಂದಿನ ವಿಚಾರಣೆಯವರೆಗೆ ನೀರಿನ ಮಟ್ಟವನ್ನು 139 ಅಡಿಗೆ ಉಳಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದರು.

ಆಗ್ನೇಯ ಮುಂಗಾರು ಮಾರುತವು ನಿರ್ಗಮಿಸಿದೆಯಾದರೂ,ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈಶಾನ್ಯ ಮುಂಗಾರು ಮಳೆಯಾಗುತ್ತಿದ್ದು, ಅದು ನವೆಂಬರ್ ತಿಂಗಳ ಅಂತ್ಯದವರೆಗೂ ಮುಂದುವರಿಯಲಿದೆ ಎಂದರು. ಒಂದು ವೇಳೆ ನೀರಿನ ಮಟ್ಟವು ಈಗಾಗಲೇ 142 ಅಡಿಗಳಾಗಿದ್ದಲ್ಲಿ ಜಲಾಶಯಕ್ಕೆ ಹೆಚ್ಚುವರಿ ನೀರನ್ನು ಹಿಡಿದಿಡಲು ಸಾಧ್ಯವಾಗದು ಮತ್ತು ಅಣೆಕಟ್ಟಿನ ಗೇಟುಗಳನ್ನು ತೆರೆಯೇಕಾದೀತು ಎಂದರು.

            ತಮಿಳುನಾಡು ಸರಕಾರದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಶೇಖರ ನಫಾಡೆ ಅವರು ಕೇರಳವು ನವೆಂಬರ್ 10ರವರೆಗೆ ನೀರಿನ ಮಟ್ಟವನ್ನು 139.5 ಅಡಿಯವರೆಗೆ ಕಾಪಾಡಿಕೊಳ್ಳಲು ಶಕ್ತವಾಗಲಿದೆ ಎಂದರು. ಪ್ರತಿ ವರ್ಷವೂ ಕೇರಳವು ನೀರಿನ ಮಟ್ಟವನ್ನು 142 ಅಡಿಗಿಂತ ಕೆಳಗಿರಿಸಲು ಪ್ರಯತ್ನಿಸುತ್ತಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries