ನವದೆಹಲಿ: ಸುಮಾರು 11 ಕೋಟಿ ಜನರಿಗೆ ಕೊರೊನಾ ಕೊರೊನಾ ಲಸಿಕೆಯ ಎರಡನೇ ಡೋಸ್‌ನ ಅವಧಿ ಮುಗಿದಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶ ರಿಳಿಸಿದೆ. ಸುಮಾರು 11 ಕೋಟಿ ಜನರು ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಹಾಕಿಸಿಕೊಂಡಿದ್ದಾರೆ. ಈಗ ಎರಡನೇ ಡೋಸ್ ಲಸಿಕೆ ಪಡೆಯುವ ಅವಧಿ ಮುಗಿದಿದೆ. ಆದರೆ ಇನ್ನು ಕೂಡಾ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ಡೇಟಾವು ಉಲ್ಲೇಖ ಮಾಡಿದೆ.
ಕೊರೊನಾ ವೈರಸ್ ಸೋಂಕಿನ ವಿರುದ್ದ ಮೊದಲ ಡೋಸ್ ಲಸಿಕೆಯನ್ನು ಪಡೆದ 3.92 ಕೋಟಿಗೂ ಹೆಚ್ಚು ಫಲಾನುಭವಿಗಳು ಕೊರೊನಾ ಲಸಿಕೆಯ ಎರಡನೇ ಡೋಸ್ ಅನ್ನು ಆರು ವಾರಗಳು ಕಳೆದರೂ ಕೂಡಾ ಹಾಕಿಸಿಕೊಂಡಿಲ್ಲ. 3.92 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದು ಆರು ವಾರಗಳು ಕಳೆದಿದೆ ಎಂದು ಡೇಟಾವು ತೋರಿಸಿದೆ.
ಸುಮಾರು 1.57 ಕೋಟಿ ಮಂದಿ ನಾಲ್ಕರಿಂದ ಆರು ವಾರಗಳವರೆಗೆ ಕಳೆದರೂ ಕೂಡಾ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿಲ್ಲ. ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ ಎರಡನೇ ಡೋಸ್ ಲಸಿಕೆಯನ್ನು ಪಡೆಯಲು 1.50 ಕೋಟಿಗಿಂತ ಹೆಚ್ಚು ಮಂದಿ ಬಾಕಿ ಆಗಿದ್ದಾರೆ. 1.50 ಕೋಟಿಗಿಂತ ಹೆಚ್ಚು ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದು ನಾಲ್ಕು ವಾರಗಳು ಆಗಿದೆ ಎಂದು ವರದಿಯು ಹೇಳಿದೆ. ಅಲ್ಲದೆ, 3.38 ಕೋಟಿಗೂ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆಯಲು ಎರಡು ವಾರಗಳವರೆಗೆ ವಿಳಂಬ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಬುಧವಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಈ ವಿಷಯವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಚರ್ಚೆ ಮಾಡಿದ್ದಾರೆ. ಎರಡನೇ ಡೋಸ್‌ನ ಅವಧಿ ಮುಗಿದಿದ್ದರೂ ಇನ್ನೂ ಕೂಡಾ ಲಸಿಕೆಯನ್ನು ಪಡೆಯದವರಿಗೆ ಲಸಿಕೆ ನೀಡುವ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ.
ಕೋವಿಶೀಲ್ಡ್ ಲಸಿಕೆಯನ್ನು ಪಡೆದವರಿಗೆ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವು 12 ವಾರಗಳು ಆಗಿದೆ. ಹಾಗೆಯೇ ಕೋವಾಕ್ಸಿನ್ ಲಸಿಕೆಯನ್ನು ಪಡೆದವರಿಗೆ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರವು ನಾಲ್ಕು ವಾರಗಳು ಆಗಿದೆ. ಎರಡೂ ಡೋಸ್ ಲಸಿಕೆಯನ್ನು ಪಡೆದರೆ ಮಾತ್ರ ದೇಶದಲ್ಲಿ ಸಂಪೂರ್ಣವಾಗಿ ಕೊರೊನಾ ಲಸಿಕೆಯನ್ನು ಪಡೆಯಲಾಗಿದೆ ಎಂದು ಪರಿಗಣಿಸಲಾಗುತ್ತದೆ.