ನವದೆಹಲಿ: ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 11 ಕ್ರೀಡಾಪಟುಗಳ ಹೆಸರನ್ನು ಈ ವರ್ಷದ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಇನ್ನೂ ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಿತಿ ಶಿಫಾರಸು ಮಾಡಿದೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟೋಕಿಯೊ ಒಲಿಂಪಿಕ್ಸ್ ನಂತರ ಈ ಪ್ರಶಸ್ತಿಗಳನ್ನು ನೀಡಬೇಕೆಂದು ಮುಂದೂಡಿದ್ದರು.
ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಹೆಸರುಗಳು:
ನೀರಜ್ ಚೋಪ್ರಾ (ಅಥ್ಲೆಟಿಕ್ಸ್)
ರವಿ ದಹಿಯಾ (ಕುಸ್ತಿ)
ಪಿಆರ್ ಶ್ರೀಜೇಶ್ (ಹಾಕಿ)
ಲೊವ್ಲಿನಾ ಬೊರ್ಗೊಹೈ (ಬಾಕ್ಸಿಂಗ್)
ಸುನಿಲ್ ಛೆಟ್ರಿ (ಫುಟ್ ಬಾಲ್)
ಮಿಥಾಲಿ ರಾಜ್ (ಕ್ರಿಕೆಟ್)
ಪ್ರಮೋದ್ ಭಗತ್ (ಬ್ಯಾಡ್ಮಿಂಟನ್)
ಸುಮಿತ್ ಆಂಟಿಲ್ (ಅಥ್ಲೆಟಿಕ್ಸ್)
ಅವನಿ ಲೇಖರ (ಶೂಟಿಂಗ್)
ಕೃಷ್ಣ ನಗರ (ಬ್ಯಾಡ್ಮಿಂಟನ್)
ಮನೀಶ್ ನರ್ವಾಲ್ (ಶೂಟಿಂಗ್)
ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಹೆಸರುಗಳು:
ಯೋಗೇಶ್ ಕಥುನಿಯಾ (ಡಿಸ್ಕಸ್ ಥ್ರೋ)
ನಿಶಾದ್ ಕುಮಾರ್ (ಹೈಜಂಪ್)
ಪ್ರವೀಣ್ ಕುಮಾರ್ (ಹೈಜಂಪ್)
ಶರದ್ ಕುಮಾರ್ (ಹೈ ಜಂಪ್)
ಸುಹಾಸ್ LY (ಬ್ಯಾಡ್ಮಿಂಟನ್)
ಸಿಂಗ್ರಾಜ್ ಅಧಾನ (ಶೂಟಿಂಗ್)
ಭಾವಿನಾ ಪಟೇಲ್ (ಟೇಬಲ್ ಟೆನಿಸ್)
ಹರ್ವಿಂದರ್ ಸಿಂಗ್ (ಶೂಟಿಂಗ್)
ಶಿಖರ್ ಧವನ್ (ಕ್ರಿಕೆಟ್)