ತಿರುವನಂತಪುರಂ: ರಾಜ್ಯದಲ್ಲಿ ಇಂದು 12,297 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 1904, ತ್ರಿಶೂರ್ 1552, ತಿರುವನಂತಪುರ 1420, ಕೋಝಿಕ್ಕೋಡ್ 1112, ಕೊಟ್ಟಾಯಂ 894, ಮಲಪ್ಪುರಂ 894, ಕೊಲ್ಲಂ 746, ಪಾಲಕ್ಕಾಡ್ 720, ಆಲಪ್ಪುಳ 700, ಇಡುಕ್ಕಿ 639, ಕಣ್ಣೂರು 606, ಪತ್ತನಂತಿಟ್ಟ 554, ವಯನಾಡ್ 366 ಮತ್ತು ಕಾಸರಗೋಡು 190 ಎಂಬಂತೆ ಕೋವಿಡ್ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 88,914 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ 10 ಕ್ಕಿಂತ ಹೆಚ್ಚಿನ 368 ಸ್ಥಳೀಯ ಸಂಸ್ಥೆಗಳಲ್ಲಿ 745 ವಾರ್ಡ್‍ಗಳನ್ನು ಒಳಗೊಂಡಿದೆ. ಇಲ್ಲಿ ಕಠಿಣ ನಿಯಂತ್ರಣ ಇರುತ್ತದೆ.
ಪ್ರಸ್ತುತ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,29,581 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ. ಇವರಲ್ಲಿ 4,12,902 ಮಂದಿ ಜನರು ಮನೆ / ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ. 16,679 ಮಂದಿ ಆಸ್ಪತ್ರೆಗಳಲ್ಲಿ ಇದ್ದಾರೆ. ಒಟ್ಟು 1101 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಸ್ತುತ, 1,37,043 ಕೋವಿಡ್ ಪ್ರಕರಣಗಳಲ್ಲಿ ಕೇವಲ 11 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ, ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 74 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 25,377 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 61 ಮಂದಿ ರಾಜ್ಯದ ಹೊರಗಿಂದ ಬಂದÀವರು. 11,742 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ. 444 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. 50 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 16,333 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 1354, ಕೊಲ್ಲಂ 1924, ಪತ್ತನಂತಿಟ್ಟ 995, ಆಲಪ್ಪುಳ 1033, ಕೊಟ್ಟಾಯಂ 1014, ಇಡುಕ್ಕಿ 688, ಎರ್ನಾಕುಳಂ 1728, ತ್ರಿಶೂರ್ 1738, ಪಾಲಕ್ಕಾಡ್ 1108, ಮಲಪ್ಪುರಂ 1268, ಕೋಝಿಕ್ಕೋಡ್ 1754, ವಯನಾಡ್ 674, ಕಣ್ಣೂರು 840 ಮತ್ತು ಕಾಸರಗೋಡು 215 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ, 1,37,043 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 45,57,199 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.