ತಿರುವನಂತಪುರಂ: ಕಳೆದ ಐದು ವರ್ಷಗಳಲ್ಲಿ ಸಚಿವರು ಮತ್ತು ಶಾಸಕರ ವಿರುದ್ಧದ ದಾಖಲಾಗಿದ್ದ 128 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಚಿವರ ವಿರುದ್ಧದ 12 ಪ್ರಕರಣಗಳು ಮತ್ತು ಶಾಸಕರ ಮೇಲಿನ 94 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಜತೆಗೆ ಸಚಿವರು ಹಾಗೂ ಶಾಸಕರು ಜಂಟಿಯಾಗಿ 22 ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ ಎಂದು ಸಿಎಂ ಹೇಳಿದರು.
ವಿಧಾನಸಭೆಯಲ್ಲಿ ಕೆ.ಕೆ ರೆಮಾ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರಿಸುತ್ತಿದ್ದರು. 2007ರ ನಂತರದ ಪ್ರಕರಣಗಳು ಸೇರಿದಂತೆ ಒಟ್ಟು 150 ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರ ಹೇಳಿತ್ತು ಎಂದು ಸಿಎಂ ತಿಳಿಸಿದರು. ಹಿಂಪಡೆಯಲಾದ ಬಹುತೇಕ ಪ್ರಕರಣಗಳೂ ಎಲ್ ಡಿಎಫ್ ಜನಪ್ರತಿನಿಧಿಗಳದ್ದಾಗಿದೆ.
ಸಚಿವರ ಪೈಕಿ ವಿ.ಶಿವಂಕುಟ್ಟಿಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚು ವಾಪಸ್ ಪಡೆದವುಗಳಾಗಿದೆ. ಶಿವಂಕುಟ್ಟಿ ವಿರುದ್ಧದ ಹದಿಮೂರು ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಆರ್ ಬಿಂದು ಮತ್ತು ಪಿಣರಾಯಿ ವಿಜಯನ್ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಸಚಿವೆ ಆರ್. ಬಿಂದು ವಿರುದ್ಧದ ಏಳು ಪ್ರಕರಣಗಳು ಮತ್ತು ಮುಖ್ಯಮಂತ್ರಿ ವಿರುದ್ಧದ ಆರು ಪ್ರಕರಣಗಳನ್ನು ಹಿಂಪಡೆಯಲಾಗಿದೆ.