ರೋಮ್: ಸಂಕಷ್ಟ ಎದುರಿಸುತ್ತಿರುವ ಅಫ್ಘಾನಿಸ್ತಾನಕ್ಕೆ ಜಿ-20 ದೇಶಗಳ ನಾಯಕರು ಮಾನವೀಯ ನೆಲೆಯ ನೆರವು ನೀಡಲು ನಿರ್ಧರಿಸಿದ್ದಾರೆ.
ನಿನ್ನೆ ನಡೆದ ಜಿ20 ದೇಶಗಳ ಮುಖ್ಯಸ್ಥರು/ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಅಫ್ಘಾನಿಸ್ತಾನದ ಪುನಶ್ಚೇತನಕ್ಕೆ ಐರೋಪ್ಯ ಒಕ್ಕೂಟ ಸುಮಾರು 1.2 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾಗಿದೆ.
ಜಿ20 ದೇಶಗಳ ಸಭೆ ಆಯೋಜಿಸಿದ್ದ ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ, ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಕೇವಲ 5 ದಿನಗಳಲ್ಲಿ ಜಿ-20 ನಾಯಕರ ಸಭೆ ಕರೆಯಬೇಕೆಂದು ಒತ್ತಾಯಿಸುತ್ತಿದ್ದರು.
ಅಫ್ಘನ್ ನೆರವು ಕಲ್ಪಿಸವಲ್ಲಿ ಜಿ-20 ರಾಷ್ಟ್ರಗಳು ಗುರುತರ ಜವಾಬ್ದಾರಿ ಹೊಂದಿವೆ. ಈ ತುರ್ತು ಪರಿಸ್ಥಿತಿಯಲ್ಲಿ ಅಫ್ಘನ್ ಜನರಿಗೆ ನಾವು ನೆರವಾಗಬೇಕಿದೆ ಎಂದು ಡ್ರಾಗಿ ಹೇಳಿದ್ದಾರೆ.