HEALTH TIPS

ಜೆರುಸಲೆಂನಲ್ಲಿ 12ನೇ ಶತಮಾನದ ಭಾರತೀಯ ಸೂಫಿ ಸಂತನ ಪವಿತ್ರ ಸ್ಥಳಕ್ಕೆ ಜೈಶಂಕರ್ ಭೇಟಿ

Top Post Ad

Click to join Samarasasudhi Official Whatsapp Group

Qries

                    ಜೆರುಸಲೆಂಇಸ್ರೇಲ್ ಭೇಟಿ ಸಂದರ್ಭ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜೆರುಸಲೆಂನಲ್ಲಿ ನೆಲೆಗೊಂಡ ಪ್ರಾಚೀನ ಭಾರತೀಯ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

              ಆ ಚಿಕಿತ್ಸಾ ಕೇಂದ್ರದಲ್ಲಿ ಫಲಕವೊಂದನ್ನು ಜೈಶಂಕರ್ ಅವರು ಉದ್ಘಾಟಿಸಿದ್ದಾರೆ. ಅದರಲ್ಲಿ 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಭಾರತೀಯ ಚಿಕಿತ್ಸಾ ಕೇಂದ್ರ, ಭಾರತ ವಿದೇಶಾಂಗ ಸಚಿವಾಲಯದಿಂದ ಅನುದಾನಿತ ಎಂದು ಬರೆಯಲಾಗಿದೆ.

                ಈ ಚಿಕಿತ್ಸಾ ಕೇಂದ್ರದ ಹಿನ್ನೆಲೆ ಬಹಳ ಸ್ವಾರಸ್ಯಕರವಾಗಿದೆ. 12ನೇ ಶತಮಾನದಲ್ಲಿ ಭಾರತದ ಸೂಫಿ ಸಂತನೊಬ್ಬ ಪವಿತ್ರ ನಗರಿ ಜೆರುಸಲಂಗೆ ಬಂದಿದ್ದ. ಆತನ ಹೆಸರು ಬಾಬಾ ಫರೀದ್. ಆ ಸಂದರ್ಭದಲ್ಲಿ ಆತ ಅಲ್ಲಿನ ಕಲ್ಲು ಬೆಂಚಿನ ಮೇಲೆ 40 ದಿನಗಳ ಕಾಲ ಧ್ಯಾನ ಮಾಡಿದ್ದ ಎನ್ನುತ್ತಾರೆ. ಅಂದಿನಿಂದ ಮೆಕ್ಕಾಗೆ ಭೇಟಿ ನೀಡುವ ಭಾರತೀಯ ಭಕ್ತಾದಿಗಳು ಜೆರುಸಲೆಂನ ಈ ಸ್ಥಳಕ್ಕೆ ಬಂದು ಭೇಟಿ ನೀಡುವ ಪರಿಪಾಠ ಪ್ರಾರಂಭವಾಯಿತು.

             ಈ ಸ್ಥಳವೇ ಚಿಕಿತ್ಸಾ ಕೇಂದ್ರವಾಗಿ ಮಾರ್ಪಾಡಾಗಿದೆ. ಎಂಥ ಗಂಭೀರ ಆರೋಗ್ಯ ಸಮಸ್ಯೆಯಿದ್ದರೂ ಇಲ್ಲಿ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಭಕ್ತಾದಿಗಳದ್ದು. ಈ ಸ್ಥಳವನ್ನು ಭಾರತ ಸರ್ಕಾರ ೧೯೬೦ರಿಂದಲೂ ಪೋಷಿಸಿಕೊಂಡು ಬಂದಿದೆ. ವಿಶ್ವ ಮಹಾಯುದ್ಧ ಸಮಯದಲ್ಲಿ ಬ್ರಿಟಿಷ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಭಾರತೀಯ ಸೈನಿಕರು ಇಸ್ರೇಲಿಗೆ ಬಂದಾಗ ಈ ಸ್ಥಳದಲ್ಲಿಯೇ ಆಶ್ರಯ ಪಡೆದಿದ್ದರು ಎನ್ನುವುದು ವಿಶೇಷ.

             ಬಾಬಾ ಫರೀದ್ ಸ್ಥಳಕ್ಕೆ ಭೇಟಿ ನೀಡಿದ ಜೈಶಂಕರ್ 'ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ೧೨ನೇ ಶತಮಾನಕ್ಕೂ ಹಳೆಯದು ಎನ್ನುವುದರ ದ್ಯೋತಕ ಇದು' ಎಂದು ಬಣ್ಣಿಸಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries