ಕಾಸರಗೋಡು: ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ಹಾನಿ ಅಂಭವಿಸಿದೆ. 13 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 74.1 ಹೆಕ್ಟೇರ್ ಕೃಷಿ ಜಾಗದಲ್ಲಿ ನಷ್ಟ ಸಂಭವಿಸಿದೆ.
ಹೊಸದುರ್ಗ ತಾಲೂಕಿನಲ್ಲಿ 6, ವೆಳ್ಳರಿಕುಂಡ್ ನಲ್ಲಿ 6, ಮಂಜೇಶ್ವರದಲ್ಲಿ ಒಂದು ಮನೆಗಳು ಸಹಿತ 13 ಮನಗೆಳಿಗೆ ಭಾಗಶಃ ಹಾನಿಯಾಗಿವೆ. ಹೊಸದುರ್ಗ ತಾಲೂಕಿನಲ್ಲಿ ಕ್ಲಾಯಿಕ್ಕೋಡು, ಮಡಿಕೈ( 2 ಮನೆಗಳು ಹಾನಿ), ತಿಮಿರಿ, ನೀಲೇಶ್ವರ, ಕಾಞಂಗಾಡು ಗ್ರಾಮಗಳಲ್ಲಿ, ವೆಳ್ಳರಿಕುಂಡ್ ತಾಲೂಕಿನಲ್ಲಿ ಭೀಮನಡಿ, ಚಿತ್ತಾರಿಕ್ಲಲ್, ಮಾಲೋತ್( 2 ಮನೆಗಳಿಗೆ ಹಾನಿ), ಪಾಲಾವಯಲ್, ತಾಯನ್ನೂರ್ ಗ್ರಾಮಗಳಲ್ಲಿ, ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಗ್ರಾಮದಲ್ಲಿ (ಒಂದು ಮನೆ) ವಿವಿಧ ರೀತಿಯ ಹಾನಿಗಳಾಗಿವೆ. 2 ಮನೆಗಳ ಹಾನಿಯ ಹಿನ್ನೆಲೆಯಲ್ಲಿ ಸುಮಾರು 4 ಲಕ್ಷ ರೂ,ನ ನಷ್ಟ ಅಂದಾಜಿಸಲಾಗಿದೆ. ಮಾಲೋತ್ ಗ್ರಾಮದ ಕಮ್ಮಾಡಿ ಎಂಬಲ್ಲಿ ಸಿಡಿಲ ಆಘಾತಕ್ಕೆ ಮನೆಗೆ ಹಾನಿಯಾಗಿದೆ.
74.1 ಹೆಕ್ಟೇರ್ ಕೃಷಿ ಹಾನಿಯ ಹಿನ್ನೆಲೆಯಲ್ಲಿ 499 ಮಂದಿ ಕೃಷಿಕರ ಬೆಳೆಗೆ ನಾಶ ಸಂಭವಿಸಿದೆ. 1.16 ಕೋಟಿ ರೂ.ನ ನಷ್ಟ ಅಂದಾಜಿಸಲಾಗಿದೆ.
ಜಿಲ್ಲೆಯ ಶಿರಿಯ, ಪಯಸ್ವಿನಿ, ಚಂದ್ರಗಿರಿ ನದಿಗಳಲ್ಲಿ ಜಲಮಟ್ಟ ಕೆಳಸ್ತರಗೊಳ್ಳುತ್ತಿದೆ. ಶಿರಿಯದಲ್ಲಿ 91.94 ಮೀಟರ್, ಪಯಸ್ವಿನಿಯಲ್ಲಿ 15.2 ಮೀಟರ್, ಚಂದ್ರಗಿರಿಯಲ್ಲಿ 33.48 ಮೀಟರ್ ಜಲಮಟ್ಟ ಇದೆ.