HEALTH TIPS

ಕೊಟ್ಟಾಯಂನಲ್ಲಿ ಭೂಕುಸಿತ; 13 ಮಂದಿ ನಾಪತ್ತೆ: ಕೊಚ್ಚಿಹೋದ ಮನೆಗಳು

                 ಕೊಟ್ಟಾಯಂ: ಭಾರೀ ಮಳೆಯಿಂದಾಗಿ ಕೊಟ್ಟಾಯಂನಲ್ಲಿ ಭೂಕುಸಿತ ಉಂಟಾಗಿದೆ . ಚೋಳತಡಂ ಕೂಟಿಕಲ್ ಗ್ರಾಮ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಭೂ ಕುಸಿತದಿಂದ  13 ಜನರು ಕಾಣೆಯಾಗಿದ್ದಾರೆ. ಮೂರು ಮನೆಗಳು ಕೊಚ್ಚಿ ಹೋಗಿವೆ. ಈ ಪ್ರದೇಶದಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ.

                  ದಕ್ಷಿಣ ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದೆ. ಬಹುತೇಕ ಕಡೆಗಳಲ್ಲಿ ಆಳೆತ್ತರದಲ್ಲಿ ಮಳೆ ನೀಥೂಂಬಿನಿಂತಿರುವುದು ವರದಿಯಾಗಿದೆ. ಈ ಪ್ರದೇಶದ ಪ್ರಮುಖ ತಗ್ಗು ಪ್ರದೇಶಗಳಾದ  ಕೂಟಿಕಲ್, ಎಂತಯಾರ್, ಕೂಟಕ್ಕಾಯಂ ಮತ್ತು ಕಾಂಜಿರಪಳ್ಳಿಗÀಳು ಜಲಾವೃತಗೊಂಡಿವೆ. ಈ ಪ್ರದೇಶದ ಸಂಪರ್ಕ ಕಡಿತಗೊಂಡಿದೆ ಎಂದು ಜಿಲ್ಲಾಡಳಿತ ಹೇಳಿದೆ.

                ಕೊಟ್ಟಾಯಂನ ವಿವಿಧ ಭಾಗಗಳಲ್ಲಿ ಪ್ರವಾಹದಿಂದಾಗಿ ಜನರು ತಮ್ಮ ಮನೆಯ ಎರಡನೇ ಮಹಡಿಯಲ್ಲಿ ನಿಂತಿದ್ದಾರೆ. ಅವರನ್ನು ಸುರಕ್ಷಿತವಾಗಿ ತರಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries