ತಿರುವನಂತಪುರ: ರಾಜ್ಯದಲ್ಲಿ ಮಳೆ ಎಚ್ಚರಿಕೆಯಲ್ಲಿ ಬದಲಾವಣೆ ನೀಡಲಾ|ಗಿದೆ. ಐದು ಜಿಲ್ಲೆಗಳಲ್ಲಿ ನೀಡಲಾಗಿದ್ದ ಭಾರೀ ಮಳೆ ಎಚ್ಚರಿಕೆಯನ್ನು (ಆರೆಂಜ್ ಅಲರ್ಟ್) ಹಿಂಪಡೆಯಲಾಗಿದೆ. ಕಾಸರಗೋಡು ಹೊರತುಪಡಿಸಿ ಉಳಿದ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ವಿವಿಧೆಡೆ ತುಂತುರು ಮಳೆಯ ಸ|ಊಚನೆ ನೀಡಲಾಗಿದೆ. ನೈಋತ್ಯ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಪಶ್ಚಿಮಕ್ಕೆ ಸಂಚರಿಸುತ್ತಿದ್ದು ಪ್ರಸ್ತುತ ಶ್ರೀಲಂಕಾ ಮತ್ತು ತಮಿಳುನಾಡಿನ ಕರಾವಳಿಯ ಸಮೀಪದಲ್ಲಿ ಕೇಂದ್ರೀಕೃತವಾಗಿದೆ.
ಪಶ್ಚಿಮ ದಿಕ್ಕಿನ ಚಲನೆ ಮುಂದಿನ 34 ಗಂಟೆಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ವಾಯುಭಾರ ನಿಮ್ನತೆಯ ಹಿನ್ನೆಲೆಯಲ್ಲಿ ನವೆಂಬರ್ 4ರವರೆಗೆ ಕೇರಳದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.