ತಿರುವನಂತಪುರಂ: ಕೇರಳ ವಿಧಾನಸಭೆಯ 141 ಸದಸ್ಯರ ಸಂಖ್ಯೆ ಇನ್ನು ಇತಿಹಾಸ. ವಿಧಾನಸಭೆಯು ಇನ್ನು ಕೇವಲ 140 ಸದಸ್ಯರನ್ನು ಹೊಂದಿರುತ್ತದೆ. ಕೇಂದ್ರ ಸರ್ಕಾರ ಸಂವಿಧಾನದ ತಿದ್ದುಪಡಿ ಮೂಲಕ ಶಾಸನ ಸಭೆಗಳಲ್ಲಿ ಆಂಗ್ಲೋ ಇಂಡಿಯನ್ನರ ನಾಮನಿರ್ದೇಶನವನ್ನು ರದ್ದುಪಡಿಸಿದ ನಂತರ ಆಂಗ್ಲೋ ಇಂಡಿಯನ್ನರ ಸಂಖ್ಯೆ ಕ್ಷೀಣಿಸುತ್ತಿದೆ.
ಚುನಾಯಿತ 140 ಶಾಸಕರ ಜೊತೆಗೆ, ಆಂಗ್ಲೋ-ಇಂಡಿಯನ್ ಪ್ರತಿನಿಧಿಯನ್ನು ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ವಿಧಾನಸಭೆಗೆ ನಾಮನಿರ್ದೇಶನ ಮಾಡುತ್ತಿದ್ದರು. ಅದರಂತೆ ಇದುವರೆಗೆ 141 ಸದಸ್ಯ ಬಲದ ಕೇರಳ ವಿಧಾನಸಭೆಯನ್ನು ಘೋಷಿಸಲಾಗಿತ್ತು.