ಮೈಸೂರು: ಸಾಮಾನ್ಯವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ (5 ಕಿ.ಮೀ.) ಜಂಬೂಸವಾರಿ ಮೆರವಣಿಗೆ ನಡೆಯುತ್ತದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ವರ್ಷವೂ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಯಿತು. ಈ ಬಾರಿ ಕೇವಲ 15 ನಿಮಿಷದಲ್ಲೇ ಜಂಬೂಸವಾರಿ ಮುಕ್ತವಾಯಿತು.
ಸಂಜೆ 5.26 ನಿಮಿಷಕ್ಕೆ ಜಂಬೂಸವಾರಿಗೆ ಸಿಎಂ ಹಾಗೂ ಗಣ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು. ಮರವಣಿಗೆ ಆರಂಭವಾದ 15 ನಿಮಿಷದಲ್ಲೇ ಅರಮನೆ ಆವರಣದಲ್ಲೇ ಮೆರವಣಿಗೆ ಮುಕ್ತಾಯವಾಗಿದೆ. ಮೆರವಣಿಗೆ ಬಳಿಕ ರಾಷ್ಟ್ರಗೀತೆ ನುಡಿಸಿ ಜಂಬೂಸವಾರಿಯನ್ನು ಅಂತ್ಯಗೊಳಿಸಲಾಯಿತು.
ಕಳೆದ ಬಾರಿಯಂತೆ ಈ ಬಾರಿಯು ಸರಳ ಆಚರಣೆ ಮಾಡಲಾಯಿತು. ಕೇವಲ 500 ಮಂದಿಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತು. ಆದರೆ, 5 ಸಾವಿರಕ್ಕೂ ಹೆಚ್ಚು ಮಂದಿಗೆ ಅವಕಾಶ ದೊರೆತಿದೆ. ಸಾವಿರಾರು ಜನರಿಗೆ ಜಂಬೂಸವಾರಿ ಕಾಣದೆ ನಿರಾಸೆಯಾಗಿದೆ. ಪ್ರತಿವರ್ಷ ಲಕ್ಷಾಂತರ ಸಂಖ್ಯೆಯ ಜನರಿಂದ ಜಂಬೂಸವಾರಿ ವೀಕ್ಷಣೆಯಾಗುತಿತ್ತು. ಆದರೆ ಈ ಬಾರಿಯೂ ಕೆಲವೇ ಮಂದಿಗೆ ಅವಕಾಶ ದೊರೆತಿದೆ.