ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1ಕ್ಕಿಂತ ಕಡಿಮೆ ಅಂದರೆ ಶೇ.0.68ರಷ್ಟಿದ್ದು, 2020ರ ಮಾರ್ಚ್ ತಿಂಗಳಲ್ಲಿ ದಾಖಲಾದ ಪ್ರಮಾಣಕ್ಕಿಂತ ಕಡಿಮೆ ಎನ್ನಲಾಗಿದೆ.
ಸದ್ಯ ದೇಶದಲ್ಲಿ 2 ಲಕ್ಷದ 30 ಸಾವಿರದ 971 ಸಕ್ರಿಯ ಪ್ರಕರಣಗಳಿದ್ದು, ಕಳೆದ 208 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಒಟ್ಟಾರೆ ಇದುವರೆಗೆ 3 ಕೋಟಿಯ 32 ಲಕ್ಷದ 71 ಸಾವಿರದ 915 ಮಂದಿ ಗುಣಮುಖರಾಗಿದ್ದಾರೆ.ಗುಣಮುಖರಾದವರ ಸಂಖ್ಯೆ ಪ್ರಸ್ತುತ ಶೇಕಡಾ 97.99ರಷ್ಟಿದ್ದು ಕಳೆದ ವರ್ಷ ಮಾರ್ಚ್ ನಿಂದ ಗರಿಷ್ಠವಾಗಿದೆ. ದೇಶದಲ್ಲಿ ಸೋಂಕಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 4 ಲಕ್ಷದ 50 ಸಾವಿರದ 589.
ಇದುವರೆಗೆ ದೇಶದಲ್ಲಿ 94 ಕೋಟಿಯ 70 ಲಕ್ಷದ 10 ಸಾವಿರದ 175 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 66.85 ಲಕ್ಷಕ್ಕೂ ಅಧಿಕ ಮಂದಿಗೆ ನೀಡಲಾಗಿದೆ. ಇದುವರೆಗೆ 58.25 ಕೋಟಿ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಅಂಕಿಅಂಶ ನೀಡಿದೆ.