HEALTH TIPS

ಬಿಬಿಸಿಯ 1 ಮಿಲಿಯನ್ ಪೌಂಡ್ ಬಹುಮಾನದ ʼಅರ್ಥ್‍ಶಾಟ್ʼ ಪ್ರಶಸ್ತಿ ಗೆದ್ದ ಭಾರತೀಯ ʼತಕಾಚಾರ್ʼ ಸಂಸ್ಥೆ

              ನವದೆಹಲಿ :ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕೃಷಿ ತ್ಯಾಜ್ಯವನ್ನು ಉಪಯೋಗಿ ಉತ್ಪನ್ನಗಳನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಆವಿಷ್ಕರಿಸಿರುವ ವಿದ್ಯುತ್ ಮೋಹನ್ ಅವರ ತಕಾಚಾರ್ ಸಂಸ್ಥೆಗೆ ಬಿಬಿಸಿ ನೀಡುವ ಅರ್ಥ್‍ಶಾಟ್ ಪ್ರಶಸ್ತಿಯು ಕ್ಲೀನ್ ಔಟ್ ಏರ್ ವಿಭಾಗದಲ್ಲಿ ದೊರಕಿದೆ. ಈ ಪ್ರಶಸ್ತಿಯ ಭಾಗವಾಗಿ ಕಂಪೆನಿಗೆ 1 ಮಿಲಿಯನ್ ಪೌಂಡ್ ಬಹುಮಾನ ದೊರೆಯಲಿದೆ. ವಿದ್ಯುತ್ ಮೋಹನ್ ಅವರು ತಕಾಚಾರ್ ಸಂಸ್ಥೆಯ ಸಹಸ್ಥಾಪಕರಾಗಿದ್ದಾರೆ.

              ದಿಲ್ಲಿಯಲ್ಲಿ ಕುಸಿಯುತ್ತಿರುವ ವಾಯು ಗುಣಮಟ್ಟವು ತಮಗೆ ಈ ಉತ್ಪನ್ನ ಆವಿಷ್ಕರಿಸಲು ನಾಂದಿಯಾಯಿತು ಎಂದು ವಿದ್ಯುತ್ ಮೋಹನ್ ಹೇಳುತ್ತಾರೆ.

           ವಿದ್ಯುತ್ ಮೋಹನ್ ಅವರ ಹೊರತಾಗಿ ಭಾರತದ 15 ವರ್ಷದ ವಿನೀಶಾ ಉಮಾಶಂಕರ್ ಅವರೂ ಈ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದರೂ ಆಕೆಗೆ ಈ ಪ್ರಶಸ್ತಿ ದೊರಕಿಲ್ಲ, ಆದರೂ ಆಕೆಯ ಆವಿಷ್ಕಾರವಾದ ಸೌರ ವಿದ್ಯುತ್ ಚಾಲಿತ ಐರನಿಂಗ್ ಕಾರ್ಟ್‍ಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆಯೋಜಕರು ಆಕೆಗೆ ನೆರವಾಗಲಿದ್ದಾರೆ.

             ಜಗತ್ತು ಎದುರಿಸುವ ಪರಿಸರ ಸಂಬಂಧಿ ಸಮಸ್ಯೆಗಳಿಗೆ 2030ರೊಳಗೆ ಪರಿಹರಿಸಲು ಕನಿಷ್ಠ 50 ಪರಿಹಾರಗಳನ್ನು ಒದಗಿಸುವವರಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಪ್ರತಿ ವರ್ಷ ಐದು ಮಂದಿಗೆ ಒಂದು ಮಿಲಿಯನ್ ಪೌಂಡ್ ನಗದು ಬಹುಮಾನ ಹೊಂದಿದ ಅರ್ಥ್‍ಶಾಟ್ ಪ್ರಶಸ್ತಿಗಳನ್ನು ಬಿಬಿಸಿ ನೀಡಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries