ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೋಮವಾರ ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ವಂಚನೆ ಸಂಬಂಧಿಸಿದ ನಿಯಮಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾಲನೆ ಮಾಡಿಲ್ಲ ಎಂಬ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐಗೆ ದಂಡ ವಿಧಿಸಿದೆ ಎಂದು ವರದಿ ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಗಳ ಬಗ್ಗೆ ತನಿಖೆ ನಡೆಸಲಾಗಿದೆ ಮತ್ತು ವಂಚನೆಗಳ ಬಗ್ಗೆ ಎಸ್‌ಬಿಐ ಬಳಿ ವರದಿ ಮಾಡುವಲ್ಲಿ ಅಡೆತಡೆಗಳು ಇದೆ. ಈ ನಿಟ್ಟಿನಲ್ಲಿ ಎಸ್‌ಬಿಐಗೆ ದಂಡ ವಿಧಿಸಲಾಗಿದೆ ಎಂದು ನಿಯಂತ್ರಕರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ನಿಯಂತ್ರಕರು, "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಸ್‌ಬಿಐನಲ್ಲಿ ಇರುವ ಗ್ರಾಹಕರ ಖಾತೆಯ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ಅಡೆತಡೆಗಳು ಇರುವುದು ಕಂಡು ಬಂದಿದೆ," ಎಂದು ಹೇಳಿದ್ದಾರೆ.
"ಯಾವುದೇ ವಂಚನೆ ನಡೆದ ಸಂದರ್ಭದಲ್ಲಿ ಆ ಬಗ್ಗೆ ದೂರು ದಾಖಲು ಮಾಡುವಾಗ ಎಸ್‌ಬಿಐನ ಕೆಲವು ಅಡೆತಡೆಗಳಿಂದಾಗಿ ವಿಳಂಬವಾಗುತ್ತದೆ. ಈ ನಿಟ್ಟಿನಲ್ಲಿ ದಂಡ ವಿಧಿಸಲಾಗಿದೆ," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.
ಆರ್‌ಬಿಐಯು ಎಸ್‌ಬಿಐಗೆ ನೋಟಿಸ್ ಅನ್ನು ಕೂಡಾ ನೀಡಿದೆ. ಈ ನೋಟಿಸ್‌ನಲ್ಲಿ ದೇಶದ ಅತೀ ದೊಡ್ಡ ಸಾಲದಾತ ಬ್ಯಾಂಕ್‌ನ ಈ ತಪ್ಪಿನ ಮೇಲೆ ಏಕೆ ದಂಡ ವಿಧಿಸಬಾರದು ಎಂದು ಸಲಹೆಯನ್ನು ಸೂಚಿಸಿ ಎಂದು ಹೇಳಿದೆ. ಈ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎಸ್‌ಬಿಐ ಮೇಲೆ ಛಾಟಿ ಏಟು ಬೀಸಿದೆ.
ಎಸ್‌ಬಿಐ ಬ್ಯಾಂಕು ನೀಡಿದ ಪ್ರತಿಕ್ರಿಯೆಯ ಬಳಿಕ ಹಾಗೂ ವಿಚಾರಣೆಯಲ್ಲಿ ಬ್ಯಾಂಕಿನ ಉತ್ತರದ ಬಳಿಕ ಆರ್‌ಬಿಐಯು ಎಸ್‌ಬಿಐನಲ್ಲಿ ಲೋಪ ಇರುವುದನ್ನು ಸಾಬೀತು ಪಡಿಸಿದೆ. ಬಳಿಕ ಒಂದು ಕೋಟಿ ದಂಡವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಆರ್‌ಬಿಐ ವಿಧಿಸಿದೆ.