ತಿರುವನಂತಪುರ: ಶಾಲೆ ಪುನರಾರಂಭಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 27 ರಂದು ಮಾರ್ಗಸೂಚಿಗಳನ್ನು ಪೂರ್ಣಗೊಳಿಸಲು ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರು ಖಚಿತಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಸಚಿವ ವಿ ಶಿವಂ ಕುಟ್ಟಿ ಹೇಳಿರುವರು. ಇದನ್ನು ಖಚಿತಪಡಿಸಿಕೊಳ್ಳಲು ಎಇಒ ಮತ್ತು ಡಿಇಒ ಮೂಲಕ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಮಕ್ಕಳಿಗೆ ಹೋಮಿಯೋಪತಿ ಔಷಧಿಗಳನ್ನು ನೀಡುವ ವ್ಯವಸ್ಥೆ ಮಾಡಬೇಕು. ಒಂದು ಶಾಲೆಯಲ್ಲಿ ಕನಿಷ್ಠ ಒಬ್ಬ ವೈದ್ಯರ ಸೇವೆಯನ್ನು ಖಾತ್ರಿಪಡಿಸಬೇಕು. ಶಾಲೆಗಳಲ್ಲಿ ಸ್ಯಾನಿಟೈಸರ್‍ಗಳು, ಥರ್ಮಲ್ ಸ್ಕ್ಯಾನರ್‍ಗಳು ಮತ್ತು ಆಕ್ಸಿಮೀಟರ್‍ಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರತಿ ತರಗತಿಯ ಕೆಲಸವನ್ನು ಶಿಕ್ಷಕರಿಗೆ ನಿಯೋಜಿಸಬೇಕು.
27ರಂದು ಪಿಟಿಎ ಸಭೆ ಸೇರಿ ವ್ಯವಸ್ಥೆಗಳ ಅವಲೋಕನ ನಡೆಸಬೇಕು. ಸಭೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಬೇಕು. ಮಕ್ಕಳ ಭೋಜನ ವಿತರಣೆಯ ಕಾರ್ಯವನ್ನು ನಿರ್ಧರಿಸಬೇಕು. ಒಂದೂವರೆ ವರ್ಷದಿಂದ ಮುಚ್ಚಿದ ಶಾಲೆಗಳನ್ನು ಸರೀಸೃಪಗಳಿಲ್ಲದೆ ಸ್ವಚ್ಛವಾಗಿಡುವಲ್ಲಿ ಮುತುವರ್ಜಿ ವಹಿಸಬೇಕು. ಪ್ರತಿ ಶಾಲೆಯು ಕೊರೋನಾ ಪೆÇ್ರೀಟೋಕಾಲ್ ಅನುಸಾರವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ವ್ಯವಸ್ಥೆಯನ್ನು ಹೊಂದಿರಬೇಕು. ಶಿಕ್ಷಕರು ಮತ್ತು ಸ್ಥಳೀಯಾಡಳಿತ ಪ್ರತಿನಿಧಿಗಳು ಶಾಲೆಯ ಮುಖ್ಯದ್ವಾರದಿಂದ ಮಕ್ಕಳನ್ನು ಸ್ವಾಗತಿಸಬೇಕು. ಶಾಲೆಯ ವಾತಾವರಣವನ್ನು ಆಹ್ಲಾದಕರವಾಗಿಸಲು ವ್ಯವಸ್ಥೆ ಮಾಡಬೇಕು. ಪಿಟಿಎ ನೇತೃತ್ವದಲ್ಲಿ ಪೋಷಕರ ಸಣ್ಣ ಸಭೆಗಳನ್ನು ಕರೆಯಬೇಕು. 27ರಂದು ಶಾಲೆಯಲ್ಲಿ ಸಹಾಯವಾಣಿ ಆರಂಭಿಸಿ ಮೇಲ್ವಿಚಾರಣೆಗೆ ಜವಾಬ್ದಾರಿಯುತರನ್ನು ನಿಯೋಜಿಸಬೇಕು. ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರು ಶಾಲಾ ಪರಿಸರದ ಪೋಲೀಸ್ ಠಾಣೆಯೊಂದಿಗೆ ಸಂವಹನ ನಡೆಸಬೇಕು ಎಂದು ಸಚಿವರು ಸೂಚಿಸಿದರು.
ಶಾಲೆಗಳಿಗೆ ಫಿಟ್‍ನೆಸ್ ಪ್ರಮಾಣಪತ್ರ ಕಡ್ಡಾಯವಾಗಿದೆ. ಫಿಟ್ನೆಸ್ ಪಡೆಯದ ಶಾಲೆಗಳ ಮಕ್ಕಳನ್ನು ಹತ್ತಿರದ ಶಾಲೆಯಲ್ಲಿ ಕಲಿಸಬಹುದೇ ಎಂದು ಪರೀಕ್ಷಿಸಬೇಕು ಎಂದು ಶಿಕ್ಷಣ ಸಚಿವರು ಸೂಚಿಸಿದರು. ಶೈಕ್ಷಣಿಕ ಮಾರ್ಗಸೂಚಿಗಳನ್ನು ಎರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.