ಕೊರೊನಾ ವ್ಯಾಕ್ಸಿನ್ ಬಂದ ಮೇಲೆ ಕೊರೊನಾವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ. ಇದೀಗ ಕೊರೊನಾ ಇಳಿಮುಖವಾಗಿದ್ದು ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಬಹುತೇಕ ಜನರು ಕೊರೊನಾ ಲಸಿಕೆ ಪಡೆದಿರುವುದಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಕೊರೊನಾ ಕಂಡು ಬಂದರೂ ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಂಡು ಬರುತ್ತಿರುವುದು ಸಮಧಾನಕರ.
ಕೊರೊನಾ ಲಸಿಕೆ ಇದೀಗ ನಮ್ಮ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಅದಕ್ಕಿಂತ ಕೆಳಗಿನವರಿಗೆ ಯಾವಾಗ ಬರುತ್ತದೆ ಎಂದು ಕೇಳಲಾಗುತ್ತಿತ್ತು. ಶಾಲಾ-ಕಾಲೇಜುಗಳು ಓಪನ್ ಆಗಿರುವುದರಿಂದ ತಮ್ಮ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಲಸಿಕೆ ಬಂದರೆ ಸಾಕು ಎಂದು ಬಯಸುತ್ತಿದ್ದಾರೆ.
ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮಕ್ಕಳಿಗೆ ನೀಡಲು ಅನುಮತಿ ಭಾರತದಲ್ಲಿ ಕೊವಿಶೀಲ್ಡ್, ಕೊವಾಕ್ಸಿನ್ ಎಂಬ ಎರಡು ಬಗೆಯ ಲಸಿಕೆಗಳನ್ನು ನೀಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ನೀಡಲು ಈ ಎರಡೂ ಲಸಿಕೆಗಳು ಸುರಕ್ಷಿತ ಎಂಬುವುದು ಸಾಬೀತಾಗಿದೆ. ಇದೀಗ ತುರ್ತು ಪರಿಸ್ಥಿತಿ ಉಂಟಾದರೆ 2 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿದೆ. 'ತುಂಬಾ ಆಳವಾಗಿ ಅಧ್ಯಯನ ಮಾಡಿದ ಬಳಿಕ 2-18 ವರ್ಷದ ಮಕ್ಕಳಿಗೆ ತುರ್ತುಪರಿಸ್ಥಿತಿಯಲ್ಲಿ ಮಾತ್ರ ಕೊವಾಕ್ಸಿನ್ ನೀಡಲು ಅನುಮತಿ ನೀಡಲಾಗಿದೆ ಎಂದು ಎಕ್ಸ್‌ಪರ್ಟ್ ಪ್ಯಾನಲ್ ಕಮಿಟಿ ಹೇಳಿದೆ. ಲಸಿಕೆಯನ್ನು 2 ಡೋಸ್‌ನಲ್ಲಿ ನೀಡಲಾಗುವುದು. ಮೊದಲ ಡೋಸ್ ಪಡೆದ 20 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುವುದು.
ಮಕ್ಕಳಿಗೆ ನೀಡಲು ಒಟ್ಟು 2 ಕೊರೊನಾ ಲಸಿಕೆಗಳಿಗೆ ಅನುಮತಿ ಸಿಕ್ಕಿದೆ ಜೈಡಸ್ ಹೆಲ್ತ್‌ಕೇರ್‌ನ ZyCoV-D ಲಸಿಕೆಗೆ ಮೊದಲಿಗೆ ಅನುಮತಿ ಸಿಕ್ಕಿತು. ಈ ಕಂಪನಿಯ ಲಸಿಕೆ 2 ವರ್ಷದ ಮೇಲ್ಪಟ್ಟ ಮಕ್ಕಳಿಗೆ ನೀಡಲು ಸುರಕ್ಷಿತವಾಗಿದೆ ಎಂದು ಸಾಬೀತಾಗಿದೆ. ಇದೀಗ ಮಕ್ಕಳಿಗೆ ನೀಡಲು ಅನುಮತಿ ಸಿಕ್ಕಿರುವ 2ನೇ ಕೊರೊನಾ ಲಸಿಕೆಯೆಂದರೆ ಅದು ಕೊವಾಕ್ಸಿನ್ ಆಗಿದೆ.ಸ್ವಯಂಪ್ರೇರಿತವಾಗಿ ಬಂದ 525 ಮಕ್ಕಳ ಮೇಲೆ ಪ್ರಯೋಗ ಈ ಲಸಿಕೆಯನ್ನು ಸ್ವಯಂಪ್ರೇರಿತವಾಗಿ ಬಂದ ಒಟ್ಟು 525 ಮಕ್ಕಳ ಮೇಲೆ ಪ್ರಯೋಗ ಮಾಡಲಾಯಿತು. ಒಟ್ಟು 3 ಹಂತದಲ್ಲಿ ಪ್ರಯೋಗ ಮಾಡಲಾಯಿತು. ಸೆಪ್ಟೆಂಬರ್ ಕೊನೆಯಲ್ಲಿ ಈ ಟ್ರಯಲ್ ಡಾಟಾ ತಯಾರಿಸಿ ಅಕ್ಟೋಬರ್ ಮೊದಲ ವಾರದಲ್ಲಿ ಸರ್ಕಾರ ಹಾಗೂ ಡ್ರಗ್ ರೆಗ್ಯೂಲೇಟರ್‌ಗೆ ಕಳುಹಿಸಲಾಯಿತು. ಈಗ ಈ ಲಸಿಕೆಗೆ ಅನುಮತಿ ಸಿಕ್ಕಿದೆ.
ಈ ಲಸಿಕೆಯನ್ನು ರೋಗನಿರೋಧಕ ಯೋಜನೆಯಲ್ಲಿ ಬಳಸಬಹುದು ಎಕ್ಸ್‌ಪರ್ಟ್ ಪ್ಯಾನೆಲ್ ನಿರ್ಧಾರ ತೆಗೆದುಕೊಂಡರೆ ಶೀಘ್ರದಲ್ಲಿಯೇ ಇದನ್ನು ಕೋವಿಡ್ 19 ರೋಗನಿರೋಧಕ ಯೋಜನೆಯಲ್ಲಿ ಸೇರಿಸಬಹುದು. ಮಕ್ಕಳ ಕೊವಾಕ್ಸಿನ್ ಪ್ರಭಾವದ ಟ್ರಯಲ್ ಡಾಟಾ ತಯಾರಿಸಿ ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO)ಗೆ ಕಳುಹಿಸಲಾಯಿತು. ಟ್ರಯಲ್ ಅನ್ನು 3 ಹಂತದಲ್ಲಿ ಮಾಡಲಾಗಿದ್ದು ಮೂರೂ ಹಂತದಲ್ಲಿ ಈ ಲಸಿಕೆ ಮಕ್ಕಳಿಗೆ ಸುರಕ್ಷಿತ ಹಾಗೂ ಅವರಲ್ಲಿ ಕೋವಿಡ್ 19 ವಿರುದ್ಧ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಲು ಸಹಕಾರಿ ಎಂಬುವುದು ಸಾಬೀತಾಗಿದೆ.
ಡೋಸ್ ಸಿರೆಂಜ್‌ನಲ್ಲಿ ಮೊದಲೇ ತುಂಬಿ ಬರಲಿದೆ ದೊಡ್ಡವರಿಗೆ ಒಂದು ಕೊವಾಕ್ಸಿನ್ ವಯಲ್ (ಬಾಟಲಿ)ನಿಂದ 10 ಜನರಿಗೆ ನೀಡಲಾಗುತ್ತಿತ್ತು. ಆದರೆ ಮಕ್ಕಳಿಗೆ ಕೊಡುವುದಾದರೆ ಸಿರೆಂಜ್‌ನಲ್ಲಿ ಡೋಸ್ ತುಂಬಿ ಬರಲಿದೆ. ಡೋಸ್‌ನಲ್ಲಿ ವ್ಯತ್ಯಾಸ ಉಂಟಾಗದಿರಲು ಈ ರೀತಿ ಮಾಡಲಾಗುವುದು.