ಬದಿಯಡ್ಕ: ಮೂಕಪ್ರಾಣಿಗಳ ನೋವನ್ನು ಅರಿತು ಅವುಗಳಿಗೆ ಅಗತ್ಯವುಳ್ಳ ಚಿಕಿತ್ಸೆಯನ್ನು ನೀಡುವಲ್ಲಿ ನಾವು ಹಿಂದೇಟು ಹಾಕಬಾರದು. ಜೀವಕ್ಕೇ ಕುತ್ತಾಗುವಂತಹ ಮಾರಕವಾದ ಕಾಲುಬಾಯಿ ರೋಗದ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹೇಳಿದರು.
ಬುಧವಾರ ಬದಿಯಡ್ಕ ಗ್ರಾಮಪಂಚಾಯಿತಿ ಬೇಳದಲ್ಲಿರುವ ಕಾಸರಗೋಡು ಕುಬ್ಜ ತಳಿ ಜಾನುವಾರು ಸಂವಧರ್Àನಾ ಕೇಂದ್ರದಲ್ಲಿ ಕೇರಳ ಸರ್ಕಾರದ ಮೃಗಸಂರಕ್ಷಣ ಇಲಾಖೆ, ದೇಶೀಯ ಮೃಗ ರೋಗ ನಿಯಂತ್ರಣಾ ಯೋಜನೆಯ ಅಂಗವಾಗಿ ನಡೆದ ಉಚಿತ ಕಾಲುಬಾಯಿ ರೋಗ ಪ್ರತಿರೋಧ ಚುಚ್ಚುಮದ್ದಿನ ಕಾಸರಗೋಡು ಜಿಲ್ಲಾಮಟ್ಟದ 2ನೇ ಹಂತದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಮೃಗಸಂರಕ್ಷಣಾ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಪಿ. ನಾಗರಾಜ ಮಾತನಾಡಿ ಜಾನುವಾರುಗಳಿಗೆ ರೋಗವು ಬರದಂತೆ ನಾವು ಎಚ್ಚರವಹಿಸಿಬೇಕು. ಈ ರೋಗವನ್ನು ಸಂಪೂರ್ಣ ಇಲ್ಲದಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಗ್ರಾಮಪಂಚಾಯಿತಿ ಸದಸ್ಯರುಗಳಾದ ಸ್ವಪ್ನ, ಅಬ್ದುಲ್ ರಹಿಮಾನ್, ಚೀಫ್ ವೆಟರ್ನರಿ ಆಫೀಸರ್ ಡಾ. ಎ. ಮುರಳೀಧರನ್, ತಾಲೂಕು ಸಂಚಾಲಕ ಡಾ. ಮಹೇಶ ಜಿ.ಕೆ., ಫಾಮ್ ಆಫೀಸರ್ ಡಾ. ರಾಮಮೋಹನ ಶೆಟ್ಟಿ, ಲ್ಯಾಬ್ ಆಫೀಸರ್ ಡಾ. ಸೇತುಲಕ್ಷ್ಮೀ, ಬದಿಯಡ್ಕ ಗ್ರಾಮಪಂಚಾಯಿತಿ ಮೃಗಸಂರಕ್ಷಣಾಕಾರಿ ಡಾ. ಇ. ಚಂದ್ರಬಾಬು ಉಪಸ್ಥಿತರಿದ್ದರು. ಡೆಪ್ಯೂಟಿ ಡೈರೆಕ್ಟರ್ ಡಾ. ಸುನಿಲ್ ಜಿ.ಎಂ. ಸ್ವಾಗತಿಸಿ, ಜಿಲ್ಲಾ ಸಂಚಾಲಕಿ ಡಾ.ಮಂಜು ಎಸ್. ವಂದಿಸಿದರು.
ಅಭಿಮತ:
ಮೂಕಪ್ರಾಣಿಗಳಿಗೆ ಅತಿಯಾದ ನೋವನ್ನು ನೀಡುವ ಕಾಲುಬಾಯಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಷಕ್ಕೆರಡುಬಾರಿ ರಾಜ್ಯಾದ್ಯಂತ ಎಲ್ಲಾ ಜಾನುವಾರುಗಳಿಗೆ ರೋಗಪ್ರತಿರೋಧ ಚುಚ್ಚುಮದ್ದನ್ನು ನೀಡಲಾಗುವುದು. ಇದೊಂದು ಪರಸ್ಪರ ಹರಡುವ ರೋಗವಾದುದರಿಂದ ಕೃಷಿಕರು ಎಚ್ಚರಿಕೆಯಿಂದ ತಮ್ಮ ಜಾನುವಾರುಗಳನ್ನು ಸಂರಕ್ಷಿಸಬೇಕಾಗಿದೆ.
- ಡಾ. ಪಿ. ನಾಗರಾಜ, ಜಿಲ್ಲಾ ಮೃಗಸಂರಕ್ಷಣ ಇಲಾಖೆ
..................................................................................
ಅಕ್ಟೋಬರ್ 6ರಿಂದ ನವಂಬರ್ 3ರ ತನಕ ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಪ್ರತಿರೋಧ ಚುಚುಮದ್ದು ನೀಡಲು 87 ವಾಕ್ಸಿನೇಶನ್ ತಂಡವನ್ನು ನೇಮಿಸಲಾಗಿದೆ. ಇವರು ಮನೆಮನೆಗಳಿಗೆ ತೆರಳಿ ಚುಚ್ಚುಮದ್ದು ನೀಡುತ್ತಾರೆ. ಕಾಸರಗೋಡು ಜಿಲ್ಲೆಯಲ್ಲಿ 73,694 ಜಾನುವಾರುಗಳು ಹಾಗೂ 1506 ಎಮ್ಮೆ ವರ್ಗದ ಪ್ರಾಣಿಗಳಿವೆ.
- ಡಾ. ಸುನಿಲ್ ಜಿ.ಎಂ. ಡೆಪ್ಯೂಟಿ ಡೈರೆಕ್ಟರ್, ಮೃಗಸಂರಕ್ಷಣಾ ಇಲಾಖೆ