ಕೋಝಿಕ್ಕೋಡ್: ಕೇರಳದಲ್ಲಿ ಶೇ.4.37ರಷ್ಟು ತಾಯಂದಿರು 15ರಿಂದ 19 ವರ್ಷದೊಳಗಿನವರು ಎಂದು ಅಂದಾಜಿಸಲಾಗಿದೆ. ರಾಜ್ಯ ಆರ್ಥಿಕ ಅಂಕಿಅಂಶ ಇಲಾಖೆ ಪ್ರಕಟಿಸಿರುವ ವರದಿಯಲ್ಲಿ ಈ ಆಘಾತಕಾರಿ ಅಂಕಿಅಂಶಗಳಿವೆ. 2019 ರಲ್ಲಿ 20,995 ಮಂದಿ ಹತ್ತೊಂಬತ್ತು ವರ್ಷಕ್ಕಿಂತ ಮೊದಲು ತಾಯಂದಿರಾಗಿದ್ದಾರೆ. ಇದರಲ್ಲಿ 15 ವರ್ಷದೊಳಗಿನ ಮೂವರು ತಾಯಂದಿರು ಸೇರಿದ್ದಾರೆ. 2019ರಲ್ಲಿ ಕೇರಳದಲ್ಲಿ 4,80,113 ಮಕ್ಕಳು ಜನಿಸಿದ್ದಾರೆ.
20,995 ತಾಯಂದಿರಲ್ಲಿ 316 ಮಂದಿಗೆ ಎರಡನೇ ಹೆರಿಗೆಯಾಗಿದೆ. 59 ಮಂದಿಗೆ ಮೂರನೇ ಹೆರಿಗೆ ಮತ್ತು 16 ಮಂದಿ ನಾಲ್ಕನೇ ಹೆರಿಗೆಯಾಗಿದೆ. ಇಂತಹ ಹೆರಿಗೆಗಳು ನಗರಗಳಲ್ಲಿ ಹೆಚ್ಚು ಎಂದು ದಾಖಲೆಗಳು ತೋರಿಸುತ್ತವೆ. ಬಹುತೇಕರು 10ನೇ ತರಗತಿ ಪಾಸಾಗಿದ್ದು, ಕಾಲೇಜು ಶಿಕ್ಷಣ ಪಡೆದಿಲ್ಲ. ಇದೇ ವೇಳೆ, ಕಳೆದ ಐದು ವರ್ಷಗಳಿಂದ ಹದಿಹರೆಯದ ತಾಯಂದಿರ ಸಂಖ್ಯೆಯು ಕ್ಷೀಣಿಸುತ್ತಿದೆ. ಅಂಕಿಅಂಶಗಳು 2015 (23,893), 2016 (22,934), 2017 (22,552) ಮತ್ತು 2018 (20,461).
ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು ಹದಿಹರೆಯದ ತಾಯಂದಿರಿದ್ದಾರೆ. 20.73 ರಷ್ಟು ಹದಿಹರೆಯದವರಿಗೆ ಹೆರಿಗೆಯಾಗಿದೆ. ವಯನಾಡ್ ಶೇ.5747 ಮತ್ತು ಕೋಝಿಕ್ಕೋಡ್ ಶೇ.17.22 ಹೊಂದಿದೆ. ಆಲಪ್ಪುಳದಲ್ಲಿ ಅತಿ ಕಡಿಮೆ ಅಂದರೆ 8.28 ಶೇ.ಇದೆ. ಈ ವರ್ಗದಲ್ಲಿ 16,139 ಜನರಿದ್ದಾರೆ. 57 ಮಂದಿ ಮಾತ್ರ ಅನಕ್ಷರಸ್ಥರು. 38 ಮಂದಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. 10ನೇ ತರಗತಿಗಿಂತ ಕೆಳಗಿನ 1463 ವಿದ್ಯಾರ್ಥಿಗಳಿದ್ದಾರೆ.
ಅವರಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದ ಹದಿಹರೆಯದ ಹುಡುಗಿಯರು. 16,089 ಮಂದಿ ತಾಯಂದಿರು ಎಂದು ಅಂದಾಜಿಸಲಾಗಿದೆ. ವರದಿಯ ಪ್ರಕಾರ ಹಿಂದೂ ಸಮುದಾಯದ 4285 ಹುಡುಗಿಯರು ಮತ್ತು ಕ್ರಿಶ್ಚಿಯನ್ ಸಮುದಾಯದ 586 ಹುಡುಗಿಯರು ತಾಯಂದಿರಾಗಿದ್ದಾರೆ.