ಬೆಂಗಳೂರು: 2020-21 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಭಾನುವಾರ ಪ್ರಕಟಿಸಿದೆ. ಇದರ ಜೊತೆಗೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸಾಹಿತ್ಯ ಕ್ಷೇತ್ರದಿಂದ ಚಾಮರಾಜನಗರ ಜಿಲ್ಲೆಯ ಮಹಾದೇವ ಶಂಕನಪುರ, ಚಿತ್ರದುರ್ಗ ಜಿಲ್ಲೆಯ ಪ್ರೊಫೆಸರ್ ಡಿ.ಟಿ. ರಂಗಸ್ವಾಮಿ, ರಾಯಚೂರು ಜಿಲ್ಲೆಯ ಜಯಲಕ್ಷ್ಮಿ ಮಂಗಳ ಮೂರ್ತಿ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮಂಜುನಾಥ್, ವಿಜಯಪುರ ಜಿಲ್ಲೆಯ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ, ಬಾಗಲಕೋಟೆಯ ಸಿದ್ದಪ್ಪ ಬಿದರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ರಂಗಭೂಮಿ ಕ್ಷೇತ್ರದಿಂದ ಫಕ್ಕಿರಪ್ಪ ರಾಮಪ್ಪ ಕೊಡಾಯಿ, ಪ್ರಕಾಶ್ ಬೆಳವಾಡಿ, ರಮೇಶ್ ಗೌಡ ಪಾಟೀಲ, ಮಲ್ಲೇಶಯ್ಯ , ಸಾವಿತ್ರಿ ಗೌಡರ್, ಜಾನಪದ ಕ್ಷೇತ್ರದಿಂದ ಆರ್. ಬಿ. ನಾಯಕ, ಗೌರಮ್ಮ ಹುಚ್ಚಪ್ಪ ಮಾಸ್ಟರ್, ದುರ್ಗಪ್ಪ ಚೆನ್ನದಾಸರ, ಬನ್ನಂಜೆ ಬಾಬು ಆಮೀನ್, ಮಲ್ಲಿಕಾರ್ಜುನ ರಾಚಪ್ಪ ಮುದಕವಿ, ಮಹಾರುದ್ರಪ್ಪ ವೀರಪ್ಪ ಇಟಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಗೀತ ಕ್ಷೇತ್ರದಿಂದ ತ್ಯಾಗರಾಜು ಸಿ, ಹೆರಾಲ್ಡ್ ಸಿರಿಲ್ ಡಿಸೋಜಾ, ಸಮಾಜ ಸೇವೆಯಲ್ಲಿ ಸೂಲಗಿತ್ತಿ ಯಮನವ್ವ, ಮದಲಿ ಮಾದಯ್ಯ, ಮುನಿಯಪ್ಪ ದೊಮ್ಮಲೂರು, ಬಿಎಲ್, ಪಾಟೀಲ್ , ಡಾ. ಜಿ.ಎನ್. ರಾಮಕೃಷ್ಣೇಗೌಡ, ಸಿನಿಮಾ ಕ್ಷೇತ್ರ- ದೇವರಾಜ್, ಶಿಕ್ಷಣ ಕ್ಷೇತ್ರ- ಸ್ವಾಮಿ ಲಿಂಗಪ್ಪ, ಶ್ರೀಧರ್ ಚಕ್ರವರ್ತಿ, ಪ್ರೊ. ಪಿ. ವಿ. ಕೃಷ್ಣಭಟ್, ಪತ್ರಿಕೋದ್ಯಮ ಕ್ಷೇತ್ರ-ಪಟ್ನಂ ಅನಂತ ಪದ್ಮನಾಭ, ಯು. ಬಿ. ರಾಜಲಕ್ಷಿ ಸೇರಿದಂತೆ ಮತ್ತಿತರರಿಗೆ ಪ್ರಶಸ್ತಿ ದೊರಕಿದೆ.
ವಿರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ, ಬೆಂಗಳೂರಿನ ಅದಮ್ಯ ಚೇತನ, ಅನುಗ್ರಹ ಕಣ್ಣಿನ ಆಸ್ಪತ್ರೆ, ಬನಶಂಕರಿ ಮಹಿಳಾ ಸಮಾಜ ಸೇರಿದಂತೆ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಪ್ರಶಸ್ತಿಗೆ ಆಯ್ಕೆಯಾದವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.