ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ಆಶ್ರಯದಲ್ಲಿ ದೇಶಿಯ ಮಕ್ಕಳ ದಿನಾಚರಣೆ ಅಂಗವಾಗಿ "ತುಳುನಾಡ ಮಕ್ಕಳ ಹಬ್ಬ" ದೀಪಾವಳಿಯ ಪ್ರಯುಕ್ತ ತುಳುನಾಡ ಬಾಲೆ ಬಂಗಾರ್- 2021 ಮುದ್ದು ಮಕ್ಕಳ ಫೆÇೀಟೋ ಸ್ಪರ್ಧೆ- ಸೀಸನ್ 6 ಕಾರ್ಯಕ್ರಮ ನಡೆಯಲಿದೆ.
ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಭಾವಚಿತ್ರವನ್ನು 6*9 ಸೈಜ್ ನಲ್ಲಿ 1 ಭಾವಚಿತ್ರವನ್ನು ಮಾತ್ರ ಕಳುಹಿಸತಕ್ಕದ್ದು, ಭಾವ ಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಜನನ ಪ್ರಮಾಣ ಪತ್ರದ ಕರಡು ಪ್ರತಿ, ಪೋಷಕರ ಹೆಸರು, ವಿಳಾಸವನ್ನು ಸ್ಪಷ್ಟವಾಗಿ ಬರೆದಿರಬೇಕು. ತುಳುನಾಡಿನ ಸಂಸ್ಕøತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿನ ಪೋಟೋಗಳಿಗೆ ಸ್ಪರ್ಧೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳ ಮಕ್ಕಳು ಮಾತ್ರ ಸ್ಪರ್ಧೆಗೆ ಅರ್ಹರು. ಫೆÇೀಟೋಗಳನ್ನು ಕೊರಿಯಾರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ನವೆಂಬರ್ ತಿಂಗಳ 05 ರ ಒಳಗೆ ತಲುಪುವಂತೆ ಕಳುಹಿಸಿಬೇಕು. ಕೋವಿಡ್ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಅಬ್ಬಕ್ಕ ಟಿವಿ ನೇರ ಪ್ರಸಾರದ ಮೂಲಕ ತೀರ್ಪುಗಾರರು ಹಾಗೂ ಪ್ರಮುಖ ಅತಿಥಿ ಗಣ್ಯರ ಸಮ್ಮುಖದಲ್ಲಿ ತುಳುನಾಡ ಬಾಲೆ ಬಂಗಾರ್ - 2021 ಸ್ಪರ್ಧಾ ವಿಜೇತರ ಘೋಷಣೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರವನ್ನ ನೀಡಲಾಗುವುದು. ವಿಜೇತರಿಗೆ ಬಹುಮಾನವನ್ನ ನೇರ ಮನೆಗೆ ತಂದು ವಿತರಿಸಲಾಗುವುದು. ಅಲ್ಲದೇ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರವನ್ನ ವಾಟ್ಸಪ್ ಅಥವ ಇಮೈಲ್ ಮೂಲಕ ಕಳುಹಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು, ರತನ್ ಕುಮಾರ್ ಹೊಸಂಗಡಿ. ಅಧ್ಯಕ್ಷರು ತುಳುನಾಡ ಬಾಲೆ ಬಂಗಾರ್ ಸಮಿತಿ, ತುಳುವೆರೆ ಆಯನೊ ಕೂಟ ಮಂಜೇಶ್ವರ, ಸಿಂಡ್ರೆಲಾ ನರ್ಸರಿ ಬಳಿ, ಹೊಸಬೆಟ್ಟು ಮಂಜೇಶ್ವರ -671323, ಕಾಸರಗೋಡು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗೆ 7034338773, 974636850 ಗೆ ಸಂಪರ್ಕಿಸಲು ಕೋರಲಾಗಿದೆ.