2021ರ ನವೆಂಬರ್ ತಿಂಗಳು ತುಂಬಾನೇ ವಿಶೇಷ. ಏಕೆಂದರೆ ಈ ತಿಂಗಳಿನಲ್ಲಿ ದೀಪಾವಳಿ ಹಬ್ಬವಿದೆ. ದೀಪಾವಳಿ ಎಂದ ಮೇಲೆ ಕೇಳಬೇಕೆ? ಸಡಗರ-ಸಂಭ್ರಮ ದುಪ್ಪಟ್ಟಾಗುವುದು. ಅದಲ್ಲದೆ ಇನ್ನೂ ಅನೇಕ ವಿಶೇಷ ಹಬ್ಬಗಳೂ, ವ್ರತಗಳೂ ಈ ತಿಂಗಳಿನಲ್ಲಿದೆ. ಸಂಕಷ್ಟಿ, ಪ್ರದೋಷ ವ್ರತ, ಸೂರ್ಯ ಷಷ್ಠಿ ಹೀಗೆ ಅನೇಕ ವಿಸೇಷ ದಿನಗಳಿವೆ.
ನವೆಂಬರ್‌ನ ಬಹುತೇಕ ದಿನಗಳಲ್ಲಿ ಒಂದಲ್ಲಾ ಒಂದು ವಿಶೇಷವಿದ್ದು, ಯಾವ ದಿನ ಯಾವ ಹಬ್ಬವಿದೆ, ವ್ರತವಿದೆ ಎಂಬುವುದನ್ನು ತಿಳಿಯೋಣ:
ಏಕಾದಶಿ, ದೀಪಾವಳಿ, ಅಮವಾಸ್ಯೆ ನವೆಂಬರ್ 1: ರಂಬಾ ಏಕಾದಶಿ ವ್ರತ, ಗುರು ದ್ವಾದಶಿ, ಪ್ರದೋಷ ವ್ರತ ನವೆಂಬರ್ 2: ಯಮ ದೀಪಂ, ಧನ್ವಂತರಿ ಜಯಂತಿ, ಧನತ್ರಯೋದಶಿ ನವೆಂಬರ್ 3: ಹನುಮಾನ್ ಜಯಂತಿ, ಅಭ್ಯಂಗ ಸ್ನಾನ ನವೆಂಬರ್ 4: ದೀಪಾವಳಿ, ಲಕ್ಷ್ಮಿ ಪೂಜೆ, ನರಕ ಚತುರ್ದಶಿ, ಕಾಳಿ ಪೂಜೆ ನವೆಂಬರ್ 5: ಅಮವಾಸ್ಯೆ, ಬಲಿಪ್ರತಿಪಾದ, ಕಾರ್ತಿಕ ಮಾಸದ ಆರಂಭಸ್ಕಂದ ಷಷ್ಠಿ, ಏಕಾದಶಿ, ತುಳಸಿ ವಿವಾಹ ನವೆಂಬರ್ 9 :ಸೌಭಾಗ್ಯ ಲಕ್ಷ್ಮಿ ಪೂಜೆ, ಲಾಭ ಪಂಚಮಿ ನವೆಂಬರ್ 10: ಕಂದ ಷಷ್ಠಿ ಸೂರಸಂಹಾರಂ, ಷಷ್ಠಿ ಉಪವಾಸ ನವೆಂಬರ್ 11: ಸ್ಕಂದ ಷಷ್ಠಿ ತಿರುಕಲ್ಯಾಣಂ ನವೆಂಬರ್ 13: ಅಕ್ಷಯ ನವಮಿ, ಕೂಷ್ಮಾಂಡ ನವಮಿ ನವೆಂಬರ್ 15: ಪ್ರಬೋದನಿ ಏಕಾದಶಿ, ತುಳಸಿ ವಿವಾಹ ನವೆಂಬರ್ 15ಕ್ಕೆ ಚಾತುರ್ಮಾಸ ಮುಕ್ತಾಯ
ಪ್ರದೋಷ ವ್ರತ, ಕಾರ್ತಿಕ ಹುಣ್ಣಿಮೆ, ಪುಷ್ಕರ ಮೇಳ ನವೆಂಬರ್ 16: ಪ್ರದೊಷ ವ್ರತ, ವೃಶ್ಚಿಕ ಮಾಸ ಪ್ರಾರಂಭ ಇಲ್ಲಿಂದ 2 ತಿಂಗಳವರೆಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ದರ್ಶನಕ್ಕೆ ಅನುಮತಿ ನವೆಂಬರ್ 17: ವೈಕುಂಠ ಚತುರ್ದಶಿ ನವೆಂಬರ್ 18: ಕಾರ್ತಿಕ ಪೂರ್ಣಿಮಾ ವ್ರತ ನವೆಂಬರ್ 19: ದೇವ ದೀಪಾವಳಿ, ಪುಷ್ಕರ ಮೇಳ
ಸಂಕಷ್ಠಿ, ಉತ್ಪನ್ನ ಏಕಾದಶಿ ನವೆಂಬರ್ 23: ಸಂಕಷ್ಟಿ ಗಣೇಶ ಚತುರ್ಥಿ ಈ ದಿನ ಚಂದ್ರೋದಯದ ಸಮಯ ರಾತ್ರಿ 8:29ಕ್ಕೆ ನವೆಂಬರ್ 27: ಕಾಲ ಬೈರವ ಅಷ್ಟಮಿ ನವೆಂಬರ್ 30: ಉತ್ಪನ್ನ ಏಕಾದಶಿ ವ್ರತ