ಲಡಾಖ್: ಲಡಾಖ್ ಘರ್ಷಣೆಯಲ್ಲಿ ಹೋರಾಡಿದ್ದ ಐಟಿಬಿಪಿಯ 20 ಸಿಬ್ಬಂದಿಗಳಿಗೆ ಶೌರ್ಯ ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಗಿದೆ.
ಮೇ-ಜೂನ್, 2020 ರಲ್ಲಿ ಈಶಾನ್ಯ ಲಡಾಖ್ ನಲ್ಲಿ ನಡೆದ ಚೀನಾ ಯೋಧರೊಂದಿಗಿನ ಹಿಂಸಾತ್ಮಕ ಸಂಘರ್ಷದಲ್ಲಿ ಐಟಿಬಿಪಿ ಯೋಧರು ತಮ್ಮ ಧೈರ್ಯ ಸಾಹಸಗಳಿಂದ ಚೀನಾ ಯೋಧರು ಹಿಮ್ಮೆಟ್ಟುವಂತೆ ಮಾಡಿದ್ದರು.
ಐಟಿಬಿಪಿಯ 60 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಪದಕಗಳನ್ನು ಪ್ರದಾನ ಮಾಡಿದ್ದಾರೆ.
ಈ ಪದಕಗಳನ್ನು ಆ.14 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಘೋಷಿಸಲಾಗಿತ್ತು. ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ 3,488 ಕಿ.ಮೀ ವರೆಗೂ ಗಡಿಯನ್ನು ಕಾಯುವುದಕ್ಕೆ ಕೇಂದ್ರ ಅರೆಸೇನಾಪಡೆಯನ್ನು ನಿಯೋಜಿಸಲಾಗಿದೆ. 20 ಮಂದಿಯ ಪೈಕಿ 8 ಮಂದಿಗೆ ಜೂ.15 ರಂದು ಪದಕ ಪ್ರದಾನ ಮಾಡಲಾಗಿತ್ತು ಎಂದು ಐಟಿಬಿಪಿಯ ವಕ್ತಾರರು ತಿಳಿಸಿದ್ದಾರೆ.