ಭೋಪಾಲ್: ದೇಶದಲ್ಲಿ ಒಂದು ಮರವಿದೆ, ಅದನ್ನು ವಿವಿಐಪಿ ಭದ್ರತೆಯಲ್ಲಿ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಈ ಮರವು ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ 24 ಗಂಟೆಗಳ ಭದ್ರತೆಯಲ್ಲಿದೆ. ಸಿಬ್ಬಂದಿ ಕೂಡ ಪಾಳಿ ಆಧಾರದಲ್ಲಿ ಐದು ಭದ್ರತಾ ವ್ಯವಸ್ಥೆ ನಿರ್ವಹಿಸುತ್ತಾರೆ. ಈ ಮರವನ್ನು ತುಂಬಾ ಮಹತ್ವಪೂರ್ಣವಾಗಿ ಪರಿಗಣಿಸಲು ಒಂದು ಕಾರಣವಿದೆ. ಭಗವಾನ್ ಬುದ್ಧನು ಜ್ಞಾನೋದಯವನ್ನು ಪಡೆದ ಬೋಧಿ ಮರ ಇದು.
ಮರಕ್ಕೆ ನೀರು ಸೌಕರ್ಯಕ್ಕೆ ಸಮೀಪದಲ್ಲಿ ವಿಶೇಷ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಪ್ರತಿ ವಾರ, ಉನ್ನತ ಅಧಿಕಾರಿಗಳು ಮರದ ಸ್ಥಿತಿಗತಿ ಅವಲೋಕನಕ್ಕೆ ಭೇಟಿ ನೀಡುತ್ತಾರೆ. ಎಲೆ ಉದುರಿದರೂ ಜಿಲ್ಲಾಡಳಿತಕ್ಕೆ ಒತ್ತಡ. ಮರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ತಿಂಗಳಿಗೆ ಎರಡು ಬಾರಿ ವೈದ್ಯಕೀಯ ತಪಾಸಣೆಯನ್ನೂ ಮಾಡಲಾಗುತ್ತದೆ.
ಸಾವಿರಾರು ವರ್ಷಗಳ ಹಿಂದೆ, ಮೂಲ ಬೋಧಿವೃಕ್ಷದ ಶಾಖೆಯನ್ನು ಶ್ರೀಲಂಕಾದ ಅನುರಾಧಪುರಕ್ಕೆ ತಂದು ಅಲ್ಲಿ ನೆಡಲಾಯಿತು. ಇಂದಿನ ಮರವು 2012 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಅನುರಾಧಪುರದಿಂದ ತಂದು ನೀಡಿದ ಬೋಧಿ ವೃಕ್ಷದ ಒಂದು ಶಾಖೆಯಾಗಿದೆ.
ಬೋಧಿ ಮರ 20 ಅಡಿ ಎತ್ತರವಿದೆ. ಸುರಕ್ಷತೆಗಾಗಿ ಮರದ ಸುತ್ತಲೂ ಬೇಲಿ ನಿರ್ಮಿಸಲಾಗಿದೆ. ಕೊರೋನಾಗೆ ಮುಂಚೆ, ದೇಶದ ವಿವಿಧ ಭಾಗಗಳಿಂದ ನೂರಾರು ಜನರು ಈ ಮರವನ್ನು ನೋಡಲು ಭೇಟಿ ನೀಡುತ್ತಿದ್ದರು.