ಕಾಸರಗೋಡು: ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಕಳೆದ 25 ವರ್ಷಗಳಿಂದ ಬಂಜರಾಗಿದ್ದ 10 ಹೆಕ್ಟೇರ್ ಜಾಗ ಇನ್ನು ಮುಂದೆ ಹಸುರಾಗಲಿದೆ.
ಸುಭಿಕ್ಷ ಕೇರಳಂ ಯೋಜನೆಯಲ್ಲಿ ಅಳವಡಿಸಿ ಕಾಸರಗೋಡು ನಗರಸಭೆ ವ್ಯಾಪ್ತಿಯ ಬಂಜರು ಬಯಲಿನಲ್ಲಿ ಈ ಕ್ರಮ ಜಾರಿಗೊಳ್ಳಲಿದೆ. ಅಡ್ಕತ್ತಬೈಲು ಗದ್ದೆ ಸಮಿತಿ, ಕೊರಕೋಡು ಗದ್ದೆ ಸಮಿತಿ, ನಗರಸಭೆ ಮತ್ತು ಕೃಷಿಭವನ ಜಂಟಿ ವತಿಯಿಂದ ಈ ಯೋಜನೆ ಜಾರಿಗೊಳ್ಳುತ್ತಿದೆ. ಸುಮಾರು 10 ಮಂದಿ ಯುವಕರು ಇಲ್ಲಿ ಕೃಷಿ ನಡೆಸಲು ಸಿದ್ಧರಾಗಿದ್ದಾರೆ ಎಂದು ಕೃಷಿ ಅಧಿಕಾರಿ ಮುರಳೀಧರನ್ ತಿಳಿಸಿದರು.
ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ನೇಜಿ ನೆಡುವಿಕೆಗೆ ಚಾಲನೆ ನೀಡಿದರು. ಉಪಾಧ್ಯಕ್ಷೆಷಂಸೀದಾ ಫಿರೋಝ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೃಷಿ ಸಾಧಕ ಎನ್.ಬಿ.ಪದ್ಮನಾಭ, ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ, ಸಹಾಯಕ ನಿರ್ದೇಶಕಿಯರಾದ ಸುನಿತಾ ಜೋಸೆಫ್, ಮಂಜುಳಾ, ನಗರಸಭೆ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ, ನಗರಸಭೆ ಕಾರ್ಯದರ್ಶಿ ಬಿಜು, ಪ್ರಶಾಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.