ಕಾಸರಗೋಡು: ಕೇಂದ್ರ ಸರಕಾರದ ವಿಜ್ಞಾನ-ತಂತ್ರಜ್ಞಾನ ಇಲಾಖೆಯು ರಾಜ್ಯ ವಿಜ್ಞಾನ-ತಂತ್ರಜ್ಞಾನ-ಪರಿಸರ ಇಲಾಖೆಯ ಸಹಾಯದೊಂದಿಗೆ ನಡೆಸುವ ಬಾಲವಿಜ್ಞಾನ ಕಾಂಗ್ರೆಸ್ ಸ್ಪರ್ಧೆಯು ನ. 25 ರಂದು ಆನ್ ಲೈನ್ ರೂಪದಲ್ಲಿ ಜರುಗಲಿದೆ.
ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಉದ್ಘಾಟಿಸುವರು. ಜಿಲ್ಲೆಯ ಎಲ್ಲ ಶಿಕ್ಷಣಾಲಯಗಳ ಅರ್ಹ ವಿದ್ಯಾರ್ಥಿಗಳ ಜ್ಯೂನಿಯರ್, ಸೀನಿಯರ್ ವಿಭಾಗದ ಕನಿಷ್ಠ ಒಂದು ತಂಡ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
"ವಿಜ್ಞಾನ ಅಸ್ತಿತ್ವವಾಗಿರುವ ಬದುಕು" ಎಂಬುದು ವಿಷಯವಾಗಿದೆ. 8 ನಿಮಿಷ ಪ್ರಸ್ತುತಿ, 2 ನಿಮಿಷ ಚರ್ಚೆ ಎಂಬ ರೂಪದಲ್ಲಿ ಆನ್ ಲೈನ್ ಸ್ಪರ್ಧೆ ನಡೆಯಲಿದೆ. ತಲಾ ಇಬ್ಬರು ವಿದ್ಯಾರ್ಥಿಗಳಂತೆ ಎಷ್ಟು ತಂಡ ಬೇಕಿದ್ದರೂ ಭಾಗವಹಿಸಲು ಅವಕಾಶಗಳಿವೆ. ಜ್ಯೂನಿಯರ್ ವಿಭಾಗದಲ್ಲಿ 10 ರಿಂದ 14 ವರ್ಷನ ನಡುವಿನ ವಯೋಮಾನದ , ಸೀನಿಯರ್ ವಿಭಾಗದಲ್ಲಿ 14ರಿಂದ 17 ವರ್ಷ ಪ್ರಾಯದ ನಡುವಿನ ವಯೋಮಾನದ ವಿದ್ಯಾರ್ಥಿಗಳಿರಬೇಕು. ಪ್ರಾಯ ಡಿ.31ರ ಗಣನೆ ಪ್ರಕಾರ ಇರಬೇಕು.
ವಿದ್ಯಾರ್ಥಿಗಳು, ಶಿಕ್ಷಕ ಗೈಡ್ ನವೆಂಬರ್ ಮೊದಲ ವಾರದಲ್ಲಿ ಆನ್ ಲೈನ್ ತರಬೇತಿಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳು ಭರ್ತಿಗೊಳಿಸಿದ ಎ ಫಾರಂ ನ.10ರ ಮುಂಚಿತವಾಗಿ ಸಲ್ಲಿಸಬೇಕು. ಪೂರ್ತಿಗಿಳಿಸಿದ ಪ್ರಾಜೆಕ್ಟ್ ವರದಿ, ವರ್ಕ್ ಡೈರಿ ನ.22ರ ಮುಂಚಿತವಾಗಿ ಪೆÇ್ರ.ವಿ.ಗೋಪಿನಾಥನ್, ಜಿಲ್ಲಾ ಸಂಚಾಲಕರು, ಸಿ.ಸಿ.32, ಶ್ರೀರಾಗಂ, ಚಿನ್ಮಯಾ ಕಾಲನಿ, ವಿದ್ಯಾನಗರ-ಅಂಚೆ, ವಿದ್ಯಾನಗರ, ಕಾಸರಗೋಡು-671123 ಎಂಬ ವಿಳಾಸಕ್ಕೆ ಕಳುಹಿಸಬೇಕು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಬಾಲ ವಿಜ್ಞಾನ ಕಾಂಗ್ರೆಸ್ ಸಂಚಾಲಕ ಪೆÇ್ರ.ವಿ.ಗೋಪಿನಾಥ್, ಜಿಲ್ಲಾ ಶಿಕ್ಷಣ ಸಹಾಯಕ ನಿರ್ದೇಶಕಿ ಕೆ.ವಿ.ಪುಷ್ಪಾ, ಅಕಾಡೆಮಿಕ್ ಸಂಚಾಲಕ ಪಿ.ಎಸ್.ಸಂತೋಷ್ ಕುಮಾರ್, ನ್ಯಾಯವಾದಿ ವಿಜಯನ್ ಕೋಡೋತ್, ಆನಂದನ್ ಪೇಕ್ಕಡಂ, ಚಂದ್ರಸೇನನ್ ಎನ್, ಪ್ರದೀಪ್ ಜಿ.ಎನ್ ಉಪಸ್ಥಿತರಿದ್ದರು.
ಹೆಚ್ಚುವರಿ ಮಾಹಿತಿಗೆ: 9446281854, 8848160933. gopsireenair@gmail.com ಸಂಪರ್ಕಿಸಬಹುದು.