ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿವಿಧ ಹಂತಗಳಲ್ಲಿ ನಷ್ಟಪರಿಹಾರ, ಸೌಲಭ್ಯ ರೂಪಗಳಲ್ಲಿ ರಾಜ್ಯ ಸರಕಾರ ನೀಡಿದ್ದು 285.17 ಕೋಟಿ ರೂ.ನ ಸಹಾಯ.
ಸಂತ್ರಸ್ತರಿಗೆ ಉಚಿತ ಚಿಕಿತ್ಸೆ, ಸಂಸತ್ರಸ್ತರ ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿವೇತನ, ಪರಿಚರಣೆಯ ಮಂದಿಗೆ ಆಶ್ವಾಸ ಕಿರಣ ಯೋಜನೆಯ ಆರ್ಥಿಕ ಸಹಾಯ, ಉಚಿತ ಪಡಿತರ, ಚಿಕಿತ್ಸೆಗೆ ಆಂಬುಲೆನ್ಸ್ ಸೌಲಭ್ಯ, ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ಇತ್ಯಾದಿ ನೀಡಲಾಗುತ್ತದೆ. ಸಂತ್ರಸ್ತರಿಗೆ ಆರ್ಥಿಕ ಸಹಾಯ, ಉಚಿತ ಪಡಿತರ, ಆಂಬುಲೆನ್ಸ್ ಸೌಲಭ್ಯ ಇತ್ಯಾದಿಗಳಿಗೆ 16.83 ಕೋಟಿ ರೂ., ಸಂತ್ರಸ್ತರ ಕುಟುಂಬದ ಸಾಲ ಮನ್ನಾ ರೂಪದಲ್ಲಿ 6.88 ಕೋಟಿ ರೂ. ವೆಚ್ಚಮಾಡಲಾಗಿದೆ. ಪಿಂಚಣಿ ರೂಪದಲ್ಲಿ 81.42 ಕೋಟಿ ರೂ., ಸಂಸತ್ರಸ್ತರ ಪರಿಚರಣೆ ಮಂದಿಗೆ ಆಶ್ವಾಸ ಕಿರಣ ಯೋಜನೆಯ ಪ್ರತಿ ತಿಂಗಳ ಪಿಂಚಣಿ ರೂಪದಲ್ಲಿ 4.54 ಕೋಟಿ ರೂ., ಸಂಸತ್ರಸ್ತರ ಕುಟುಂಬದ 12ನೇ ತರಗತಿ ವರೆಗೆ ಕಲಿಕೆ ನಡೆಸುತ್ತಿರುವ ಮಕ್ಕಳಿಗೆ ವಿದ್ಯಾರ್ಥಿವೇತನ ರೂಪದಲ್ಲಿ 4.44 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊಬೈಲ್ ಮೆಡಿಕಲ್ ಯೂನಿಟ್ , ಉತ್ಸವ ಭತ್ಯೆ ಇತ್ಯಾದಿ ರೂಪದಲ್ಲಿ ಜಿಲ್ಲೆಯ ಎಂಡೋಸಲ್ಫಾನ್ ಘಟಕ ಮೂಲಕ ಸಹಾಯ ಲಭಿಸುತ್ತಿದೆ.
6727 ಸಂಸತ್ರಸ್ತರು
2010,2011, 2013,2017 ಇಸವಿಗಳಲ್ಲಿ ನಡೆಸಿದ ವಿಶೇಷ ವೈದ್ಯಕೀಯ ಶಿಬಿರಗಳಲ್ಲಿ ಪತ್ತೆಮಾಡಲಾದ 6727 ಮಂದಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸೌಲಭ್ಯ ನೀಡಲಾಗುತ್ತಿದೆ. ಇವರಲ್ಲಿ 371 ಮಂದಿ ಹಾಸುಗೆ ಹಿಡಿದ ರೋಗಿಗಳು, 1499 ಮಂದಿ ಬುದ್ಧಿಮಾಂದ್ಯರು, 1189 ಮಂದಿ ವಿಶೇಷಚೇತನರು, 699 ಮಂದಿ ಕ್ಯಾನ್ಸರ್ ರೋಗಿಗಳು, 2969 ಮಂದಿ ಇತರ ಕಾಯಿಲೆಗೆ ಈಡಾದವರು. 1978ರಿಂದ 2001 ವರೆಗಿನ ಅವಧಿಯಲ್ಲಿ ಎಂಡೋಸಲ್ಫಾನ್ ಕೀಟನಾಶಕ ಸಿಂಪಡಿಸಿದ 11 ಗ್ರಾಮಪಂಚಾಯತ್ ಗಳನ್ನು ಸಂತ್ರಸ್ತರ ಪಂಚಾಯತ್ ಗಳು ಎಂದು ರಾಜ್ಯ ಸರಕಾರ ಘೋಷಿಸಿದೆ.
17 ಪ್ರಮುಖ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ
ಸಂಸತ್ರಸ್ತರಿಗೆ ತಿರುವನಂತಪುರಂನ ಶ್ರೀಚಿತ್ರ ಇನ್ಸ್ ಸ್ಟಿಟ್ಯೂಟ್ ರೀಜನಲ್ ಕ್ಯಾನ್ಸರ್ ಸೆಂಟರ್, ತಲಶ್ಶೇರಿ ಮಲಬಾರ್ ಕ್ಯಾನ್ಸರ್ ಸೆಂಟರ್, ಮಂಗಳೂರು ಯೆನಪೆÇೀಯ ಮೆಡಿಕಲ್ ಕಾಲೇಜು, ಮಣಿಪಾಲ ಕಸ್ತೂರ್ ಬಾ ಮೆಡಿಕಲ್ ಕಾಲೇಜು, ಸಹಿತ ಕರ್ನಾಟಕ, ಕೇರಳಗಳ ಪ್ರಮುಖ 17 ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆಗೆ ಸರಕಾರ ಸೌಲಭ್ಯ ಏರ್ಪಡಿಸಿದೆ.
ವಸತಿ ಸೌಲಭ್ಯ, ಸಾಮಾಜಿಕ ಅಭಿವೃದ್ಧಿಗೆ ಸಮಗ್ರ ಯೋಜನೆಗಳು ಇತ್ಯಾದಿ ಸರಕಾರ ಏರ್ಪಡಿಸಿದೆ.