ಭಾರತದ 24 ಭಾಷೆಗಳ ಸಾಹಿತ್ಯ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ವಹಿಸುವ ಕೇಂದ್ರ ಸಾಹಿತ್ಯ ಅಕಾಡೆಮಿ (ಅಕಾಡೆಮಿ ಆಫ್ ಲೆಟರ್ಸ್) ಸಂಸತ್ ಕಾಯ್ದೆಯಿಂದ ರಚಿತವಾದ ಸಂಸ್ಥೆಯಾಗಿದ್ದು, ಸ್ವಾಯತ್ತ ಸ್ಥಾನಮಾನ ಪಡೆದಿದೆ. ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ. ಭಾರತೀಯ ಸಾಹಿತ್ಯ ಹಾಗೂ ಭಾರತೀಯ ಭಾಷಾ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿದೆ. ತನ್ನ ಚಟುವಟಿಕೆಗಳಿಗಾಗಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ನೇರ ನೇಮಕಾತಿ ನಡೆಸುತ್ತಿದೆ.
ಕೇಂದ್ರ ಕಚೇರಿ ಇರುವ ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಬೆಂಗಳೂರಿನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ ಈ ಸಾಹಿತ್ಯ ಅಕಾಡೆಮಿಗೆ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷರಾಗಿದ್ದಾರೆ.
ಹುದ್ದೆ: ಸಂಖ್ಯೆ: ಮೀಸಲಾತಿ: ವೇತನ ಶ್ರೇಣಿ (ರೂ.ಗಳಲ್ಲಿ)
-ಡೆಪ್ಯುಟಿ ಸೆಕ್ರೆಟರಿ ಜನರಲ್: 1 ಹುದ್ದೆ; 67,700ರೂ-2,08,700 ರೂ (ಎಸ್ಸಿ)
-ಅಸಿಸ್ಟೆಂಟ್ ಲೈಬ್ರರಿಯನ್: 1 ಹುದ್ದೆ; 56,100ರೂ- 1,77,500 ರೂ (ಸಾಮಾನ್ಯ)
-ಅಸಿಸ್ಟೆಂಟ್ ಎಡಿಟರ್: 1 ಹುದ್ದೆ; 56,100 ರೂ- 1,77,500 ರೂ: (ಸಾಮಾನ್ಯ)
-ಪ್ರೊಗ್ರಾಮ್ ಆಫೀಸರ್: 2 ಹುದ್ದೆ: 56,100 ರೂ-1,77,500 ರೂ: (ಸಾಮಾನ್ಯ)
-ಸೀನಿಯರ್ ಅಕೌಂಟೆಂಟ್: 2 ಹುದ್ದೆ; 35,400 ರೂ- 1,12,400 ರೂ: (ಸಾಮಾನ್ಯ, ಶ್ರವಣದೋಷ)
-ಸೇಲ್ಸ್ ಕಂ ಎಕ್ಸಿಬಿಷನ್ ಅಸಿಸ್ಟೆಂಟ್: 1 ಹುದ್ದೆ; 35,400 ರೂ-1,12,400 ರೂ: (ಸಾಮಾನ್ಯ)
- ಜೂನಿಯರ್ ಕ್ಲರ್ಕ್: 3 ಹುದ್ದೆ: 19,900 ರೂ-63,200 ರೂ: ಒಬಿಸಿ(2), (ಸಾಮಾನ್ಯ)
- ಮಲ್ಟಿ ಟಾಸ್ಕಿಂಗ್ ಸ್ಟಾಫ್: 6 ಹುದ್ದೆ: 18,000 ರೂ- 56,900 ರೂ: (ಸಾಮಾನ್ಯ-4) (ಒಬಿಸಿ, ಅಂಗವಿಕಲ)
ಎಲ್ಲಿ ಕೆಲಸ?
ಡೆಪ್ಯುಟಿ ಸೆಕ್ರೆಟರಿ ಜನರಲ್, ಅಸಿಸ್ಟೆಂಟ್ ಲೈಬ್ರರಿಯನ್, ಅಸಿಸ್ಟೆಂಟ್ ಎಡಿಟರ್, ಪ್ರೊಗ್ರಾಂ ಆಫೀಸರ್, ಸೀನಿಯರ್ ಅಕೌಂಟೆಂಟ್ ಹುದ್ದೆಗಳು ನವದೆಹಲಿಯ ಕೇಂದ್ರ ಕಚೇರಿಯಲ್ಲಿವೆ. ಸೇಲ್ಸ್ ಕಮ್ ಎಕ್ಸಿಬಿಷನ್ ಅಸಿಸ್ಟೆಂಟ್ ಹುದ್ದೆಯ ಕಾರ್ಯಕ್ಷೇತ್ರ ಬೆಂಗಳೂರು ಆಗಿದೆ. ಇದಲ್ಲದೆ ಕೋಲ್ಕತ್ತ, ಮುಂಬೈಗಳಲ್ಲಿ ಇತರ ಹುದ್ದೆಗಳಿಗೆ ನೇಮಿಸಿಕೊಳ್ಳಲಾಗುತ್ತಿದೆ.
:ಅಧಿಸೂಚನೆ ಗಮನಿಸಿ
ಆಯಾ ಹುದ್ದೆಗಳಿಗೆ ಪ್ರತ್ಯೇಕ ವಿದ್ಯಾರ್ಹತೆ, ಅನುಭವ, ವಯೋಮಿತಿ ಮೊದಲಾದ ನಿಗದಿಪಡಿಸಲಾಗಿದೆ. ವಿವರಗಳಿಗೆ ಅಧಿಸೂಚನೆಯನ್ನು ಗಮನಿಸಿ.
ಅಧಿಸೂಚನೆಗೆ: https://bit.ly/
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01.11.2021
ವೆಬ್ಸೈಟ್: http://sahitya-akademi.gov.in/