ಲಂಡನ್: ಸೋಂಕಿತ ಜೀವಕೋಶಗಳಲ್ಲಿ ಕೋವಿಡ್-19ಗೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್‌ನ ಸಂತಾನೋತ್ಪತ್ತಿ ನಿಗ್ರಹಿಸುವ ಸಂಭಾವ್ಯ ಹೊಸ ಔಷಧ ಚಿಕಿತ್ಸೆಯನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.
' ಕೋವಿಡ್ 19 ಚಿಕಿತ್ಸೆಯ ಸಂಶೋಧನೆಯಲ್ಲಿ ಇದು ಒಂದು ಪ್ರಗತಿ' ಎಂದು ಕೆಂಟ್ ವಿಶ್ವವಿದ್ಯಾಲಯದ ಪ್ರೊ.ಮಾರ್ಟಿನ್ ಮೈಕೆಲಿಸ್ ಹೇಳಿದ್ದಾರೆ.
ಮೆಟಾಬೊಲೈಟ್ಸ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವು, ಸಾರ್ಸ್ -ಕೋವಿಡ್- 2 ಸೋಂಕಿತ ಜೀವಕೋಶಗಳು ಪೆಂಟೋಸ್ ಫಾಸ್ಫೇಟ್ ಪಾಥ್‌ವೇ ಎಂಬ ಚಯಾಪಚಯ ಮಾರ್ಗವನ್ನು ಸಕ್ರಿಯಗೊಳಿಸಿದಾಗ ಮಾತ್ರ ಕೊರೊನಾ ವೈರಸ್‌ಗಳನ್ನು ಉತ್ಪಾದಿಸುತ್ತವೆ ಎಂದು ಹೇಳಿದೆ.
ದ್ವಿಗುಣಗೊಳ್ಳುವ ಎಲ್ಲಾ ವೈರಸ್‌ಗಳು ಜೀವಕೋಶಗಳಿಗೆ ಸೋಂಕು ತಗುಲಿಸುತ್ತವೆ ಮತ್ತು ಕೊರೊನಾ ವೈರಸ್‌ಗಳನ್ನು ಉತ್ಪಾದಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಬೆನ್‌ಫೂಕ್ಸಿಥಿಯಾಮೈನ್ ಔಷಧವು ಸಾರ್ಸ್-ಕೋವಿಡ್-2 ವೈರಸ್‌ನ ಸಂತಾನೋತ್ಪತ್ತಿಯನ್ನು ನಿಗ್ರಹಿಸಿದ್ದನ್ನು ಮತ್ತು ಸೋಂಕಿತ ಜೀವಕೋಶಗಳು ಕೊರೊನಾ ವೈರಸ್‌ಗಳನ್ನು ಉತ್ಪಾದಿಸುವುದಿಲ್ಲ ಎಂಬುದನ್ನು ಯುಕೆಯ ಕೆಂಟ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಗೊಥೆ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.
ಬೆನ್‌ಫೊಕ್ಸಿಥಿಯಾಮೈನ್ '2-ಡಿಯೋಕ್ಸಿ-ಡಿ-ಗ್ಲೂಕೋಸ್'ನ ಆಂಟಿವೈರಲ್ ಚಟುವಟಿಕೆ ಹೆಚ್ಚಿಸಿದೆ. ಇದು ವೈರಸ್ ದ್ವಿಗುಣವಾಗುವುದನ್ನು ಕುಂಠಿತಗೊಳಿಸುವ ಮತ್ತೊಂದು ಔಷಧವಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ಔಷಧಿಯ ಆಂಟಿವೈರಲ್ ಕಾರ್ಯವಿಧಾನವು ಕೋವಿಡ್ 19 ಇತರ ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಮೊಲ್ನುಪಿರವಿರ್‌ಗಿಂತ ಭಿನ್ನವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.