ದಿಫು, ಅಸ್ಸಾಂ: ಅಸ್ಸಾಂನ ಆಗ್ಲಾಂಗ್ ಜಿಲ್ಲೆಯ ಖಟ್ಖಾಟಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಸುಮಾರು ₹2 ಕೋಟಿ ಮೌಲ್ಯದ ಸುಮಾರು 339.2 ಗ್ರಾಂ ತೂಕದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಮಣಿಪುರದಿಂದ ಬಸ್ಸನ್ನು ಪೊಲೀಸರು ಲಹರಿಜಾನ್‌ನಲ್ಲಿ ತಡೆದು ಶೋಧಿಸಿದರು. ಈ ವೇಳೆ 27 ಸಾಬೂನು ಡಬ್ಬಿಗಳಲ್ಲಿ ಅಡಗಿಸಿಟ್ಟಿದ್ದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬಂಧಿತ ವ್ಯಕ್ತಿಯು ನೆರೆಯ ರಾಜ್ಯಕ್ಕೆ ಸೇರಿದವನಾಗಿದ್ದಾನೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.