HEALTH TIPS

ಲಖಿಂಪುರ್ ಹಿಂಸಾಚಾರ: 2ನೇ ಎಫ್‌ಐಆರ್‌ನಲ್ಲಿ ಪ್ರತಿಭಟನಾಕಾರರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ!

       ಲಖಿಂಪುರ ಖೇರಿ: ಲಖಿಂಪುರ್ ಖೇರಿ ಹಿಂಸಾಚಾರದ ಬಗ್ಗೆ ದಾಖಲಾದ ಎರಡನೇ ಎಫ್‌ಐಆರ್ ನಲ್ಲಿ ಕೃಷಿ ಕಾನೂನು ವಿರೋಧಿ ಪ್ರತಿಭಟನಾಕಾರರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಾಖಲಿಸಲಾಗಿದೆ. 

      ರೈತರ ಮೇಲೆ ಹರಿದ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಇರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಜೊತೆಗೆ ರೈತರ ಹತ್ಯೆಯ ಕುರಿತು ಉಲ್ಲೇಖಿಸಲದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

      ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಮಿತ್ ಜೈಸ್ವಾಲ್ ದೂರಿನ ಆಧಾರದ ಮೇಲೆ  ಅಕ್ಟೋಬರ್ 4ರಂದು ಟಿಕೊನಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಎರಡನೇ ಎಫ್‌ಐಆರ್‌ನಲ್ಲಿ ಕೇವಲ ಒಬ್ಬ ಹೆಸರಿಲ್ಲದ ಗಲಭೆಗಾರನನ್ನು ಉಲ್ಲೇಖಿಸಲಾಗಿದೆ. ಆತನ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ನೋವನ್ನು ಉಂಟುಮಾಡುತ್ತದೆ) ಆರೋಪಗಳನ್ನು ಹೊರಿಸಲಾಗಿದೆ.

     ಅಕ್ಟೋಬರ್ 3ರಂದು ಜಿಲ್ಲೆಯ ಟಿಕೋನಿಯಾ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆಯಲ್ಲಿನ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು. ಮೃತರಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು, ಎಸ್ಯುವಿ ಚಾಲಕ ಮತ್ತು ಪತ್ರಕರ್ತರು ಸೇರಿದ್ದಾರೆ. ಜೈಸ್ವಾಲ್ ಪ್ರಕಾರ, ಪತ್ರಕರ್ತ ರಾಮನ್ ಕಶ್ಯಪ್, ಕಾರು ಚಾಲಕ ಹರಿ ಓಂ ಮತ್ತು ಬಿಜೆಪಿ ಕಾರ್ಯಕರ್ತರಾದ ಶುಭಂ ಮಿಶ್ರಾ ಮತ್ತು ಶ್ಯಾಮ್ ಸುಂದರ್ ಅವರನ್ನು ಪ್ರತಿಭಟನಾಕಾರರು ಹತ್ಯೆ ಮಾಡಿದ್ದಾರೆ.

     ರೈತರ ಪ್ರತಿಭಟನೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಾಹನದ ಮೇಲೆ ಬಿದಿರು ಕಡ್ಡಿಗಳು, ಇಟ್ಟಿಗೆಗಳು ಮತ್ತು ಕಲ್ಲುಗಳಿಂದ ದಾಳಿ ಮಾಡಿದ್ದರಿಂದ ಚಾಲಕ ಹರಿ ಓಮ್ ಗಾಯಗೊಂಡು ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿದರು ಎಂದು ಜೈಸ್ವಾಲ್ ಆರೋಪಿಸಿದ್ದಾರೆ.

      ರೈತರ ಹತ್ಯೆ ಪ್ರಕರಣ ಸಂಬಂಧ ಅಕ್ಟೋಬರ್ 9ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries